ಕರ್ನಾಟಕ

karnataka

ETV Bharat / state

ಕೆ.ಆರ್.ಆಸ್ಪತ್ರೆಯ ನಾಲ್ವರು ವೈದ್ಯರಿಗೆ ಕೊರೊನಾ: ಆತಂಕದಲ್ಲಿ ಸಿಬ್ಬಂದಿ - ಮೈಸೂರು

ಮೈಸೂರಿನ ಕೆ.ಆರ್.ಆಸ್ಪತ್ರೆಯ ನಾಲ್ವರು ವೈದ್ಯರಿಗೆ ಕೋವಿಡ್​ ಸೊಂಕು ದೃಢಪಟ್ಟಿದ್ದು, ಸಿಬ್ಬಂದಿ ಜೀವ ಭಯದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ.

Mysore
ಕೆ.ಆರ್.ಆಸ್ಪತ್ರೆಯ ನಾಲ್ವರು ವೈದ್ಯರಿಗೆ ಕೊರೊನಾ

By

Published : Apr 20, 2021, 11:31 AM IST

ಮೈಸೂರು:ನಗರದ ಕೆ.ಆರ್.ಆಸ್ಪತ್ರೆ ನಾಲ್ವರು ವೈದ್ಯರಿಗೆ ಕೋವಿಡ್​ ಸೊಂಕು ದೃಢಪಟ್ಟಿದೆ.

ಈಗಾಗಲೇ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಎದುರಿಸುತ್ತಿರುವ ಆಸ್ಪತ್ರೆಗೆ ಕಳೆದ‌ ಬಾರಿಯೇ ವೈದ್ಯರ ಹಾಗೂ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಈವರೆಗೆ ವೈದ್ಯರು ಹಾಗೂ ಸಿಬ್ಬಂದಿಯನ್ನ ಸರ್ಕಾರ ನೇಮಕ ಮಾಡಿಲ್ಲ.

ಕೋವಿಡ್ ಸೋಂಕಿತರ ಜತೆ ಇತರೆ ರೋಗಿಗಳಿಗೂ ಚಿಕಿತ್ಸೆ ನೀಡಬೇಕು. ಸದ್ಯ ವೈದ್ಯರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದೇ ದೊಡ್ಡ ಸವಾಲಾಗಿದೆ.

ಓದಿ:ದೇಶದಲ್ಲಿ ನಿನ್ನೆ 1,761 ಮಂದಿ​ ಸೋಂಕಿತರು ಸಾವು: 2.59 ಲಕ್ಷ ಹೊಸ ಕೇಸ್​ ಪತ್ತೆ

ABOUT THE AUTHOR

...view details