ಕರ್ನಾಟಕ

karnataka

ETV Bharat / state

ಬೇಸಿಗೆ ಆರಂಭದಲ್ಲೇ ಬತ್ತಿದ ಕಾಡಿನ ಕೆರೆಗಳಿಗೆ ನೀರು ತುಂಬಿಸುತ್ತಿರುವ ಸಿಬ್ಬಂದಿ

ಬೇಸಿಗೆ ಆರಂಭದಲ್ಲೇ ಬತ್ತಿದ ಕಾಡಿನ ಕೆರೆಗಳಿಗೆ ಅರಣ್ಯ ಸಿಬ್ಬಂದಿ ನೀರು ತುಂಬಿಸುವ ಕಾರ್ಯ ಕೈಗೊಂಡಿದ್ದಾರೆ.

water fill to lake in wild, Mysore forest department water fill to lake in wild, Mysore forest department news, ಕಾಡಿನ ಕೆರೆಗೆ ನೀರು ತುಂಬಿಸುತ್ತಿರುವ ಸಿಬ್ಬಂದಿ, ಮೈಸೂರಿನಲ್ಲಿ ಕಾಡಿನ ಕೆರೆಗೆ ನೀರು ತುಂಬಿಸುತ್ತಿರುವ ಸಿಬ್ಬಂದಿ, ಕಾಡಿನ ಕೆರೆಗೆ ನೀರು ತುಂಬಿಸುತ್ತಿರುವ ಸಿಬ್ಬಂದಿ ಸುದ್ದಿ, ಮೈಸೂರು ಅರಣ್ಯ ಇಲಾಖೆ, ಮೈಸೂರು ಅರಣ್ಯ ಇಲಾಖೆ ಸುದ್ದಿ,
ಬೇಸಿಗೆ ಆರಂಭದಲ್ಲೇ ಬತ್ತಿದ ಕಾಡಿನ ಕೆರೆಗಳಿಗೆ ನೀರು ತುಂಬಿಸುತ್ತಿರುವ ಸಿಬ್ಬಂದಿ

By

Published : Mar 9, 2021, 11:07 AM IST

ಮೈಸೂರು:ಬೇಸಿಗೆಯ ಆರಂಭಿಕ ದಿನಗಳಲ್ಲೇ ಬಿಸಿಲಿನ ತಾಪಕ್ಕೆ ಕಾಡು ಒಣಗಿ ಹೋಗುತ್ತಿದೆ. ಅಷ್ಟೇ ಅಲ್ಲದೆ ಇತ್ತ ಕಾಡಿನಲ್ಲಿರುವ ಹಳ್ಳ - ಕೊಳ್ಳ, ಕೆರೆಕಟ್ಟೆಗಳು ನೀರಿಲ್ಲದೇ ಬತ್ತಿ ಹೋಗುತ್ತಿವೆ.

ಕಾಡು ಪ್ರಾಣಿಗಳಿಗೆ ಬಿಸಿನಲ್ಲಿ ಹಾಹಾಕಾರ ಉಂಟಾಗಬಾರದು ಎಂಬ ಎಚ್ಚರ ವಹಿಸಿರುವ ಅರಣ್ಯ ಇಲಾಖೆ ಟ್ಯಾಂಕರ್​ಗಳ ಮೂಲಕ ಕಾಡಿನ ಕೆರೆಕಟ್ಟೆಗಳನ್ನು ತುಂಬಿಸಿ ಪ್ರಾಣಿ - ಪಕ್ಷಿಗಳ ದಾಹ ತಣಿಸಲು ಮುಂದಾಗಿದೆ.

ಬೇಸಿಗೆ ಆರಂಭದಲ್ಲೇ ಬತ್ತಿದ ಕಾಡಿನ ಕೆರೆಗಳಿಗೆ ನೀರು ತುಂಬಿಸುತ್ತಿರುವ ಸಿಬ್ಬಂದಿ

ಫೆಬ್ರವರಿ ಅಂತ್ಯದಲ್ಲಿಯೇ ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಪರಿಣಾಮ ನಾಗರಹೊಳೆ ಅರಣ್ಯದ ಸಾಕಷ್ಟು ಕೆರೆಕಟ್ಟೆಗಳು ನೀರಿಲ್ಲದೇ ಬರಡಾಗಿದ್ದವು. ಇದರಿಂದ ಪ್ರಾಣಿ - ಪಕ್ಷಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಸಹ ಹೆಚ್ಚಾಗಿತ್ತು. ಅಲ್ಲದೇ ಬೇಸಿಗೆ ತಾಪಮಾನದಿಂದ ಪಾರಾಗಲು ನೀರಿನ ಮೂಲ ಹುಡುಕಿ ಅಲ್ಲಿ ವಿಶ್ರಾಂತಿ ಪಡೆಯುವ ಹುಲಿ, ಆನೆಯಂತಹ ಕೆಲ ಪ್ರಾಣಿಗಳು ನೀರಿನ ಮೂಲ ಅರಸಿ ನೂರಾರು ಕಿಲೋ ಮೀಟರ್ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಅರಣ್ಯ ಇಲಾಖೆ ಕಾಡಿನಲ್ಲಿ ನೀರಿಲ್ಲದೇ ಬರಡಾಗಿದ್ದ ಕೆರೆಗಳಿಗೆ ಟ್ಯಾಂಕರ್​ಗಳ ಮೂಲಕ ನೀರಿನ ಪೂರೈಕೆ ಮಾಡಿ ಕೆರೆಗಳನ್ನು ತುಂಬಿಸಿದೆ.

ಕಾಡಿನ ಕೆಲ ಕೆರೆಗಳ ಸಮೀಪ ಈಗಾಗಲೇ ಕೊಳವೆ ಬಾವಿಗಳನ್ನು ಸಹ ತೆಗೆಯಲಾಗಿದ್ದು, ಅದರ ಮೂಲಕವೂ ಸಹ ಕೆರೆಗಳಿಗೆ ಪೈಪ್ ಮೂಲಕ ನೀರಿನ ಪೂರೈಕೆ ಮಾಡಿ ಪ್ರಾಣಿಗಳ ಬಾಯಾರಿಕೆಯನ್ನು ತಣಿಸುವ ಪ್ರಯತ್ನ ಅರಣ್ಯ ಇಲಾಖೆ ಮಾಡುತ್ತಿದೆ.

ಬೇಸಿಗೆ ಆರಂಭದಲ್ಲೇ ಬತ್ತಿದ ಕಾಡಿನ ಕೆರೆಗಳಿಗೆ ನೀರು ತುಂಬಿಸುತ್ತಿರುವ ಸಿಬ್ಬಂದಿ

ಚಳಿಗಾಲದ ಅರ್ಧದಿಂದ ಹಾಗೂ ಬೇಸಿಗೆಯ ಆರಂಭದಿಂದಲೂ ಬಿಸಿಲಿನ ತಾಪಮಾನ ಅಧಿಕವಿದ್ದ ಪರಿಣಾಮ ನಾಗರಹೊಳೆ ವ್ಯಾಪ್ತಿಯ ಕೆರೆಗಳು ಈಗಾಗಲೇ ನೀರಿಲ್ಲದೆ ಬತ್ತಿ ಹೋಗಿದ್ದವು. ಅಳಿದುಳಿದ ಅಲ್ಪಸ್ವಲ್ಪ ನೀರನ್ನೇ ಬಳಸಬೇಕಾದ ಅನಿವಾರ್ಯ ಕಾಡಿನ ಪ್ರಾಣಿಗಳಿಗೆ ಎದುರಾಗುವ ಅನಿವಾರ್ಯ ಉಂಟಾಗಿದ್ದರಿಂದ ಅವುಗಳಿಗಾಗಿ ಅರಣ್ಯ ಇಲಾಖೆ ಕಳೆದ ಅನೇಕ ವರ್ಷಗಳಿಂದ ಈ ರೀತಿ ಕೆರೆಗಳನ್ನು ತುಂಬಿಸುತ್ತಿದೆ.

ನಾಗರಹೊಳೆಯ ತಪ್ಪಲಿನಲ್ಲಿ ಕಬಿನಿ ನದಿ ಹರಿಯುವುದು ಕಾಡಿನ ಅಪಾರ ಜೀವ ಸಂತತಿಗೆ ನೀರಿನ ಮೂಲವಾಗಿದೆ. ಜಲಾಶಯ ಇರುವ ಕಾರಣ ಈ ನದಿಯಲ್ಲಿ ವರ್ಷಪೂರ್ತಿ ನೀರಿರುವ ಕಾರಣ ಕಾಡಿನ ಬಹುಪಾಲು ಆನೆಗಳು ಬೇಸಿಗೆಯಲ್ಲಿ ಕಬಿನಿ ಹಿನ್ನೀರಿನಲ್ಲಿ ಬೀಡು ಬಿಟ್ಟಿರುತ್ತವೆ. ಅಲ್ಲದೇ ಕಾಡಿನ ಜೀವ ಸಂಕುಲ ಈ ನೀರನ್ನು ಆಶ್ರಯಿಸಿ ಜೀವಿಸುತ್ತವೆ. ಉಳಿದಂತೆ ಕಾಡಂಚಿಗೆ ಹೊಂದಿಕೊಂಡಂತಿರುವ ಸಾಕಷ್ಟು ಕೆರೆಗಳಿಗೆ ಪೈಪ್‍ಲೈನ್ ಮೂಲಕ ಸಮೀಪದ ಜಮೀನಿನ ಕೊಳವೆ ಬಾವಿಗಳ ಸಹಾಯದ ಮೂಲಕ ನೀರಿನ ಪೂರೈಕೆ ಮಾಡಿಕೊಳ್ಳಲಾಗುತ್ತಿದ್ದು, ಸದ್ಯ ನಾಗರಹೊಳೆಯ ಕಾಡಿನ ಕೆರೆಕಟ್ಟೆಗಳಲ್ಲಿ ನೀರು ಬತ್ತಿಹೋಗಿದಂತೆ ನೋಡಿಕೊಳ್ಳಲಾಗುತ್ತಿದೆ. ಬೇಸಿಗೆಯಲ್ಲಿ ಪ್ರಾಣಿಗಳಿಗೆ ಸಂವೃದ್ಧವಾಗಿ ನೀರನ್ನು ಒದಗಿಸುವಲ್ಲಿ ಅರಣ್ಯ ಇಲಾಖೆ ಶ್ರಮಿಸಿದೆ.

ಬೇಸಿಗೆ ಆರಂಭದಲ್ಲೇ ಬತ್ತಿದ ಕಾಡಿನ ಕೆರೆಗಳಿಗೆ ನೀರು ತುಂಬಿಸುತ್ತಿರುವ ಸಿಬ್ಬಂದಿ

ಅಂತರ ಸಂತೆಯ ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ದರಾಜು ಮಾತನಾಡಿ, ಬೇಸಿಗೆಯಲ್ಲಿ ಸಹಜವಾಗಿ ಕಾಡಿನ ಹಳ್ಳಗಳು, ಕೆರೆಗಳು ನೀರಿಲ್ಲದೇ ಬತ್ತಿಹೋಗುತ್ತವೆ. ಆಗ ಪ್ರಾಣಿಗಳಿಗೆ ನೀರಿಗಾಗಿ ಪರದಾಟ ಪ್ರಾರಂಭವಾಗುತ್ತದೆ. ಅನೇಕ ವರ್ಷಗಳಿಂದ ಕಾಡಿನ ಕೆರೆಗಳಿಗೆ ಕೊಳವೆ ಬಾವಿ ಹಾಗೂ ಟ್ಯಾಂಕರ್​ಗಳ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತೆ ಎಂದು ಹೇಳಿದರು.

ABOUT THE AUTHOR

...view details