ಮೈಸೂರು: ನಗರದ ಫಿಲೊಮಿನಾ ಚರ್ಚ್ ಹಿಂಭಾಗದಲ್ಲಿ ಕೊರೊನಾ ಸೋಂಕಿಗೆ ಔಷಧ ಕೊಡುವುದಾಗಿ ಹೇಳಿ ಚಿಕಿತ್ಸೆ ನೀಡುತ್ತಿದ್ದ ಮುದಾಸಿರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಕೋವಿಡ್‌ಗೆ ಔಷಧ ಕೊಡುತ್ತೇನೆ ಎಂದ ನಕಲಿ ವೈದ್ಯನ ವಿರುದ್ಧ ಎಫ್ಐಆರ್ - ನಕಲಿ ವೈದ್ಯನ ವಿರುದ್ಧ ಎಫ್ ಐ ಆರ್
ಕೊರೊನಾ ಸೋಂಕಿಗೆ ಔಷಧ ಕೊಡುವುದಾಗಿ ಹೇಳಿ ಚಿಕಿತ್ಸೆ ನೀಡುತ್ತಿದ್ದ ಮುದಾಸಿರ್ ಎಂಬ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.
ಕೋವಿಡ್‌ಗೆ ಔಷಧ ಕೊಡುತ್ತೇನೆ ಎಂದ ನಕಲಿ ವೈದ್ಯನ ವಿರುದ್ಧ ಎಫ್ಐಆರ್
ಮುದಾಸಿರ್ ನೋಬಲ್ ಕ್ಲಿನಿಕ್ ಎಂಬ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದ. ಈತ ಚಿಕಿತ್ಸೆ ನೀಡುತ್ತಿದ್ದು, ಪರಿಶೀಲನೆ ನಡೆಸಿದಾಗ ನಕಲಿ ವೈದ್ಯ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಜಿಲ್ಲಾ ವಿಚಕ್ಷಣ ದಳದ ಸದಸ್ಯರಾದ ಭಾಗ್ಯ ಎಂಬುವವರು ದೂರು ನೀಡಿದ್ದರು.
ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.