ಕರ್ನಾಟಕ

karnataka

ETV Bharat / state

ಮೈಸೂರು ದಸರಾ 2022: ಇಂದಿನ ಯೋಗ, ಯುವ ಕವಿಗೋಷ್ಠಿ, ರೈತ ದಸರಾ ಜನರ ಆಕರ್ಷಣೆ - ಈಟಿವಿ ಭಾರತ ಕನ್ನಡ

ದಸರಾ ಮಹೋತ್ಸವದ ನಿಮಿತ್ತ ದಸರಾ ಯೋಗ ಉಪಸಮಿತಿಯಿಂದ ಅರಮನೆ ಮುಂಭಾಗದಲ್ಲಿ ಸಂಸದ ಪ್ರತಾಪ್ ಸಿಂಹ ಯೋಗ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯೋಗ ಮಾಡುವ ಮೂಲಕ ಆರೋಗ್ಯವಾಗಿರಿ ಎಂಬ ಸಂದೇಶ ಸಾರಿದರು.

mysore-fifth-day-dasara-festival
Etv Bharatಮೈಸೂರು ದಸರಾ 2022 : ಇಂದಿನ ಯೋಗ, ಯುವ ಕವಿಗೋಷ್ಠಿ, ರೈತ ದಸರಾ ಜನರ ಆಕರ್ಷಣೆ

By

Published : Sep 30, 2022, 4:35 PM IST

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಐದನೇ ದಿನದ ಕಾರ್ಯಕ್ರಮಗಳು ರಂಗೇರಿದ್ದು ಇಂದು ಅರಮನೆ ಮುಂಭಾಗದ ಪುರಭವನದ ಬಳಿ ಆರೋಜಿಸಲಾಗಿದ್ದ ಟಾಂಗಾ ಸವಾರಿ ಗಮನ ಸೆಳೆಯಿತು. ಅರಮನೆ ಮುಂಭಾಗದಲ್ಲಿ ಯೋಗ ಸರಪಳಿ ಕಾರ್ಯಕ್ರಮ, ಕೋಟೆ ಆಂಜನೇಯ ದೇವಾಲಯದ ಎದುರು ರೈತ ದಸರಾ, ಜೆಕೆ ಮೈದಾನದಲ್ಲಿ ನಡೆದ ಕೃಷಿ ವಸ್ತುಗಳ ಪ್ರದರ್ಶನ ಗಮನ ಸೆಳೆದಿದ್ದು ಅದರ ವಿಡಿಯೋ ಝಲಕ್ ಇಲ್ಲಿದೆ.

ದಸರಾ ಮಹೋತ್ಸವದ ನಿಮಿತ್ತ ದಸರಾ ಯೋಗ ಉಪಸಮಿತಿ ವತಿಯಿಂದ ಅರಮನೆ ಮುಂಭಾಗದಲ್ಲಿ ಸಂಸದ ಪ್ರತಾಪ್ ಸಿಂಹ ಯೋಗ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯೋಗ ಮಾಡುವ ಮೂಲಕ ಆರೋಗ್ಯವಾಗಿರಿ ಎಂಬ ಸಂದೇಶ ಸಾರಿದರು.

ಪಾರಂಪರಿಕ ಟಾಂಗಾ ಸವಾರಿ :ಪಾರಂಪರಿಕ ನಗರದಲ್ಲಿ ಕರ್ನಾಟಕ ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ವತಿಯಿಂದ ದಸರಾ ಅಂಗವಾಗಿ ದಂಪತಿಗಳಿಗಾಗಿಯೇ ಪಾರಂಪರಿಕ ಟಾಂಗಾ ಸವಾರಿ ಏರ್ಪಡಿಸಲಾಗಿದ್ದು, ಇವುಗಳ ಮೂಲಕ ಪಾರಂಪರಿಕ ಟಾಂಗಾ ದ ಮಹತ್ವವನ್ನು ತಿಳಿಸಲಾಯಿತು.

ಮೈಸೂರು ದಸರಾ 2022 : ಇಂದಿನ ಯೋಗ, ಯುವ ಕವಿಗೋಷ್ಠಿ, ರೈತ ದಸರಾ ಜನರ ಆಕರ್ಷಣೆ

ರೈತ ದಸರಾಗೆ ಚಾಲನೆ ನೀಡಿದ ಸಚಿವ ಬಿ.ಸಿ ಪಾಟೀಲ್ :ಅರಮನೆ ಎದುರು ಕೋಟೆ ಆಂಜನೇಯ ದೇವಾಲಯದ ಬಳಿ ದಸರಾ ಪ್ರಯುಕ್ತ ರೈತ ದಸರಾ ಕಾರ್ಯಕ್ರಮಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಸಚಿವ ಸೋಮಶೇಖರ್ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ, ಸ್ವತಃ ಸಚಿವರು ಎತ್ತಿನಗಾಡಿಯಲ್ಲಿ ಮೆರವಣಿಗೆ ಸಾಗಿದರು. ಮೆರವಣಿಗೆಯಲ್ಲಿ ಕಲಾ ತಂಡಗಳು ಅರಮನೆಯಿಂದ ಜೆ.ಕೆ ಮೈದಾನದ ವರೆಗೆ ಸಾಗಿದವು. ಜೆ.ಕೆ ಮೈದಾನದಲ್ಲಿ ಸಚಿವ ಅಶ್ವತ್ಥ ನಾರಾಯಣ್ , ಸಂಸದ ಪ್ರತಾಪ್ ಸಿಂಹ, ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡಿದರು.

ಇನ್ನೂ ಮಾನಸ ಗಂಗೋತ್ರಿ ಆವರಣದಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ನಡೆಯಿತು. ಈ ಕವಿಗೋಷ್ಠಿಗೆ ಶಾಸಕ ಜಿ.ಟಿ ದೇವೇಗೌಡ ಉದ್ಘಾಟಿಸಿದರು. ಈ ಕವಿಗೋಷ್ಠಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಿದರು.

ಇದನ್ನೂ ಓದಿ :ಮೈಸೂರು ದಸರಾ 2022: ಗ್ರಾಮೀಣ ದಸರಾಗೆ ಚಾಲನೆ

ABOUT THE AUTHOR

...view details