ಮೈಸೂರು:ನಾಡ ಹಬ್ಬ ಮೈಸೂರು ದಸರಾ ನಿಮಿತ್ತ ಮೈಸೂರಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರದಿಂದ ಇಡೀ ಮೈಸೂರನ್ನು ಝಗಮಗಿಸುವಂತೆ ಮಾಡಲಾಗಿತ್ತು. ಇದು ದಿನಕ್ಕೆ ಒಂದು ಲಕ್ಷ ರೂಪಾಯಿಯಂತೆ ಕರೆಂಟ್ ಬಿಲ್ ಬಂದಿದ್ದು. ಒಟ್ಟು 21 ದಿನಕ್ಕೆ 21 ಲಕ್ಷ ರೂಪಾಯಿ ವಿದ್ಯುತ್ ವೆಚ್ಚವಾಗಿದೆ. ಇದು ಎಲ್ಲಾ ರಸ್ತೆಗಳು, ವೃತ್ತಗಳು, ಹಲವು ಕಲಾಕೃತಿಗಳ ದೀಪಾಲಂಕಾರ ಸೇರಿದಂತೆ ನಗರದ ದೀಪಾಲಂಕಾರಕ್ಕೆ ತಗುಲಿದೆ ಒಟ್ಟು ಖರ್ಚಾಗಿದೆ.
ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಒಟ್ಟು 1.45 ಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿದ್ದು. ಈ ದೀಪಾಲಂಕಾರ ಹಲವು ಖಾಸಗಿ ಕಂಪನಿಗಳು ಸಹ ಪ್ರಾಯೋಜಕತ್ವ ಹೊಂದಿದೆ. ವಿವಿಧ ಖಾಸಗಿ ಕಂಪನಿಗಳ ಪ್ರಾಯೋಜಕತ್ವದಿಂದ ಸುಮಾರು 80 ಲಕ್ಷ ರೂಪಾಯಿಗಳು ಬಂದಿದೆ.
ಸತತ 21 ದಿನಗಳ ಝಗಮಗಿಸಿದ ದೀಪಾಲಂಕಾರ:ದಸರಾ ಹಿನ್ನೆಲೆ ನಗರದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರ ಸತತ 21 ದಿನಗಳ ಕಾಲ ರಾತ್ರಿ 7 ಗಂಟೆಯಿಂದ 11 ಗಂಟೆಯವರೆಗೆ ಇರುತ್ತಿತ್ತು. ಈ ದೀಪಾಲಂಕಾರವನ್ನು ನೋಡಲು ಪ್ರತಿನಿತ್ಯ ನಿರೀಕ್ಷೆಗೂ ಮೀರಿದ ಜನ ಸಾಗರವೇ ಹರಿದು ಬರುತ್ತಿತ್ತು. ದಸರಾ ಜಂಬೂಸವಾರಿ ಬಳಿಕ ನ.4 ರವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ ಎಂದು ಹೇಳಿದ್ದ ಸೆಸ್ಕ್ ಅಧಿಕಾರಿಗಳು, ವಾರಾಂತ್ಯ ಭಾನುವಾರವಾಗಿದ್ದರಿಂದ ನವಂಬರ್ 5 ರವರೆಗೆ ದೀಪಾಲಂಕಾರವನ್ನು ವಿಸ್ತರಿಸಿದ್ದರು.