ಮೈಸೂರು:ನಗರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೈಸೂರು ಜೋಡಿ ಕೊಲೆ: ಮತ್ತೋರ್ವ ಬಂಧನ, ನಾಲ್ವರು ನ್ಯಾಯಾಂಗ ಬಂಧನಕ್ಕೆ - ಜೋಡಿ ಕೊಲೆ ಪ್ರಕರಣ
ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಿವೇಶನ ವಿಚಾರ ಹಾಗೂ ಹಳೇ ದ್ವೇಷ ಹಿನ್ನೆಲೆ ಫೆಬ್ರವರಿ 7ರಂದು ಕಿಶನ್ ಮತ್ತು ಕಿರಣ್ ಎಂಬುವವರನ್ನು ಸ್ವಾಮಿ, ದಿಲೀಪ್, ಮಧು, ರಘು ಸೇರಿ ಬರ್ಬರವಾಗಿ ಹತ್ಯೆಗೈದಿದ್ದರು. ಘಟನೆ ಬಳಿಕ ದಿಲೀಪ್, ಮಧು ಪೊಲೀಸರಿಗೆ ಶರಣಾಗಿದ್ದರು. ಈ ಸಂಬಂಧ ಮಧುಸೂದನ ನೀಡಿದ ದೂರಿನ ಮೇರೆಗೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ದಿಲೀಪ್ (27), ಮಧು (23), ಸೋಮೇಶ್ ಅಲಿಯಾಸ್ ಮೀಸೆಸ್ವಾಮಿ (36) ಬಂಧಿಸಿದ್ದರು. ಈಗ ಮತ್ತೊಬ್ಬ ಆರೋಪಿ ರಘು (46) ನನ್ನು ಕುಂಬಾರಕೊಪ್ಪಲು ಗೇಟ್ ಬಳಿ ಗುರುವಾರ ಬಂಧಿಸಿದ್ದಾರೆ. ಜೋಡಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ನ್ಯಾಯಾಲಯ ಬಂಧನಕ್ಕೊಪ್ಪಿಸಲಾಗಿದೆ.