ಮೈಸೂರು:ಸಮಯ ಮೀರಿದ್ದರೂ ಬಾಗಿಲು ತೆರೆದು, ವ್ಯಾಪಾರ ಮಾಡುತ್ತಿದ್ದ ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದರು.
ಲಾಠಿ ಹಿಡಿದು ದೇವರಾಜ ಮಾರುಕಟ್ಟೆ ಬಂದ್ ಮಾಡಿಸಿದ ಪೊಲೀಸರು - ಮೈಸೂರಿನಲ್ಲಿ ಲಾಠಿ ಹಿಡಿದು ದೇವರಾಜ ಮಾರುಕಟ್ಟೆ ಬಂದ್ ಮಾಡಿಸಿದ ಪೊಲೀಸರು,
ಪೊಲೀಸರು ಲಾಠಿ ಹಿಡಿದು ದೇವರಾಜ ಮಾರುಕಟ್ಟೆ ಬಂದ್ ಮಾಡಿಸಿದ ಪ್ರಸಂಗ ಮೈಸೂರಿನಲ್ಲಿ ಕಂಡು ಬಂತು.

ಲಾಠಿ ಹಿಡಿದು ದೇವರಾಜ ಮಾರುಕಟ್ಟೆ ಬಂದ್ ಮಾಡಿಸಿದ ಪೊಲೀಸರು
ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದಿನಿಂದ ಮೇ 12ರವರೆಗೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ದೇವರಾಜ ಮಾರುಕಟ್ಟೆ ತರಕಾರಿ ವ್ಯಾಪಾರಿಗಳು 10 ಗಂಟೆಯಾದ್ರೂ ವ್ಯಾಪಾರದಲ್ಲಿ ಮಗ್ನರಾಗಿದ್ದರು. ಸ್ಥಳದಲ್ಲಿದ್ದ ಪೊಲೀಸರು ಅಂಗಡಿ ಮುಚ್ಚಿ ತೆರಳುವಂತೆ ಬುದ್ದಿ ಹೇಳಿದ್ರೂ ಕೇಳದೆ ಇದ್ದುದರಿಂದ ಲಾಠಿ ಹಿಡಿದು ಬಾಗಿಲು ಮುಚ್ಚಿಸಬೇಕಾಯಿತು.