ಮೈಸೂರಿನಲ್ಲಿ ಒಂದೇ ಒಂದು ಬ್ರಿಟನ್‌ನ ರೂಪಾಂತರ ವೈರಸ್ ಪ್ರಕರಣ ಇಲ್ಲ.. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ - no new corona strain found in mysore
ಲಸಿಕೆ ಬಂದ ನಂತರ ಮೊದಲು ಕೊರೊನಾ ವಾರಿಯರ್ಸ್ ಆದ 32 ಸಾವಿರ ಮಂದಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಂಡಿದೆ. ಆ ನಂತರ ಕೇಂದ್ರ ಸರ್ಕಾರದ ಆದ್ಯತೆಯ ಮೇರೆಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ..
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆ
ಮೈಸೂರು: ಬ್ರಿಟನ್ನಿಂದ ಮೈಸೂರಿಗೆ ಬಂದ ಎಲ್ಲಾ ವ್ಯಕ್ತಿಗಳ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿದೆ. ಹೀಗಾಗಿ ಮೈಸೂರಿಗೆ ಬ್ರಿಟನ್‌ನ ರೂಪಾಂತರ ವೈರಸ್ನ ಭಯವಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಭಯ ನೀಡಿದ್ದಾರೆ.
ನಗರದ ಜಯನಗರ ಸಮುದಾಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಡ್ರೈ ರನ್ಗೆ ಚಾಲನೆ ನೀಡಿ ಮಾಧ್ಯಮದವರ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮೈಸೂರಿಗೆ ಕಳೆದ ವಾರ ಬ್ರಿಟನ್ನಿಂದ ಬಂದ ಒಬ್ಬ ವ್ಯಕ್ತಿಯ ಟೆಸ್ಟಿಂಗ್ ಸ್ಯಾಂಪಲ್ ಕಳಿಸಲಾಗಿತ್ತು. ಅದೂ ಸೇರಿದಂತೆ ಬ್ರಿಟನ್ನಿಂದ ವಾಪಸ್ಸಾದ ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿವೆ ಎಂದು ತಿಳಿಸಿದ್ರು. ಇನ್ನು ಇಂದು ಕೋವಿಡ್ ಲಸಿಕೆಯ ಡ್ರೈ ರನ್‌ನಲ್ಲಿ 25 ಮಂದಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡುವ ತಾಲೀಮನ್ನು ನಡೆಸಲಾಗುವುದು.ಲಸಿಕೆ ಬಂದ ನಂತರ ಮೊದಲು ಕೊರೊನಾ ವಾರಿಯರ್ಸ್ ಆದ 32 ಸಾವಿರ ಮಂದಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಂಡಿದೆ. ಆ ನಂತರ ಕೇಂದ್ರ ಸರ್ಕಾರದ ಆದ್ಯತೆಯ ಮೇರೆಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಕೋವಿಡ್ ಲಸಿಕೆಯನ್ನು ಮೂರ್ನಾಲ್ಕು ಕಂಪನಿಗಳು ತಯಾರಿಸಲು ತೊಡಗಿದ್ದು, ಇನ್ನು ಯಾವುದು ಎಂಬ ಬಗ್ಗೆ ತೀರ್ಮಾನವಾಗಿಲ್ಲ.
ಲಸಿಕೆ ಬಂದ ನಂತರ ಅದರ ದಾಸ್ತಾನಿಗೆ ಈಗಾಗಲೇ ಸಿದ್ಧತೆ ನಡೆಸಿರುವುದಾಗಿ ಹೇಳಿದ ಅವರು, ಕೋವಿಡ್ ಲಸಿಕೆಗೆ ಪ್ರತ್ಯೇಕ ಸ್ಟೋರೇಜ್ನ ಅವಶ್ಯಕತೆ ಇಲ್ಲ. ಕೋವಿಡ್ ಲಸಿಕೆ ವಿತರಣೆಗೆ ಸರ್ಕಾರದ ಗೈಡ್ಲೈನ್ಸ್ ಇರುತ್ತದೆ, ಅದರಂತೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ರು.