ಮೈಸೂರು: ಜಂಬೂ ಸವಾರಿ ಮೆರವಣಿಗೆಗೆ ಕೇವಲ ಮೂರೇ ದಿನ (ಅಕ್ಟೋಬರ್, 26) ಬಾಕಿ ಉಳಿದಿರುವುದರಿಂದ ಅರಮನೆ ಆವರಣದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಇಂದಿನಿಂದ ಮೂರು ದಿನಗಳ ಕಾಲ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡಕ್ಕೆ ತಾಲೀಮು ನಡೆಸಲಾಗುತ್ತದೆ.
ದಸರಾ ಜಂಬೂ ಸವಾರಿಗೆ ಕೇವಲ ಮೂರು ದಿನ ಬಾಕಿ: ಗಜಪಡೆಗೆ ರಿಹರ್ಸಲ್ - Mysore Dasara Jumbo ride rehearsal
ಸರಳ ದಸರಾ ಹಿನ್ನೆಲೆ ಅರಮನೆ ಆವರಣಕ್ಕೆ ರಿಹರ್ಸಲ್ ಸೀಮಿತವಾಗಿದೆ. ಗಾರ್ಡ್ ಆಫ್ ಆನರ್, ಪುಷ್ಪಾರ್ಚನೆ ಸೇರಿ ಪ್ರಮುಖ ಕಾರ್ಯಕ್ರಮಗಳ ತಾಲೀಮು ನಡೆಸಲಾಗಿದ್ದು, ಗಜಪಡೆ ಕ್ಯಾಪ್ಟನ್ ಅಭಿಮನ್ಯು ಹಾಗೂ ಪರ್ಯಾಯವಾಗಿ ಬೇರೆ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗಿದೆ.
ಗಜಪಡೆಗೆ ರಿಹರ್ಸಲ್

ತಾಲೀಮಿನಲ್ಲಿ ಗಜಪಡೆ, ಕುದುರೆ ಸೇರಿದಂತೆ ಪೊಲೀಸ್ ಬ್ಯಾಂಡ್ ಭಾಗಿಯಾಗಿವೆ. 2 ಬಾರಿ ಈ ಜಂಬೂ ಸವಾರಿ ರಿಹರ್ಸಲ್ ನಡೆಯಲಿದೆ.