ಕರ್ನಾಟಕ

karnataka

ETV Bharat / state

ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗುತ್ತಿದ್ದಂತೆ ನಗರದ ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಹಾಗೂ ರಾಜವಂಶಸ್ಥರ ಖಾಸಗಿ ದರ್ಬಾರ್‌ಗೆ ಚಾಲನೆ ನೀಡಲಾಗಿದೆ.

ಮೈಸೂರು ದಸರಾ ಮಹೋತ್ಸವ

By

Published : Sep 29, 2019, 5:24 PM IST

ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗುತ್ತಿದ್ದಂತೆ ನಗರದ ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್‌ಗೆ ಚಾಲನೆ ನೀಡಲಾಗಿದೆ.

ರಾಜವಂಶಸ್ಥ ಯದುವೀರ್ ಅವರಿಂದ ಖಾಸಗಿ ದರ್ಬಾರ್
ಇಂದು ಬೆಳಿಗ್ಗೆ ಖಾಸಗಿ ದರ್ಬಾರ್‌ನಲ್ಲಿ ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ, ಮಲೈ ಮಹದೇಶ್ವರ ದೇವಸ್ಥಾನ, ಚಾಮುಂಡಿ ಬೆಟ್ಟದ ದೇವಸ್ಥಾನ ಸೇರಿದಂತೆ ಪ್ರಮುಖ ಏಳು ದೇವಸ್ಥಾನಗಳ ತೀರ್ಥ ಪ್ರಸಾದ ಸ್ವೀಕರಿಸಿದ್ರು. ದೇಶದ ಸಪ್ತ ನದಿಗಳ ತೀರ್ಥ ಸ್ವೀಕರಿಸಿ ಸಿಂಹಾಸನಕ್ಕೆ ಪ್ರೋಕ್ಷಣೆ ಮಾಡಿ ರತ್ನಖಚಿತ ಸಿಂಹಾಸವನ್ನೇರಿದ್ರು.

ಯದುವೀರ್ ಒಡಯರ್‌ ಸಿಂಹಾಸವೇರುತ್ತಿದ್ದಂತೆ ಜೈಕಾರಗಳು ಮೊಳಗಿದ್ವು. ಈ ವೇಳೆ ನಾಡಿನಲ್ಲಿ ಸಮೃದ್ಧ ಮಳೆ, ಬೆಳೆಯನ್ನು ತಾಯಿ ಚಾಮುಂಡೇಶ್ವರಿ ಕರುಣಿಸಲೆಂದು ಅವರು ಪ್ರಾರ್ಥಿಸಿದ್ರು.

ರಾಜವಂಶಸ್ಥರು ಅರಮನೆಯ ತಮ್ಮ ಖಾಸಗಿ ನಿವಾಸದಲ್ಲಿ ದರ್ಬಾರ್‌ ನಡೆಸುವ ಪದ್ದತಿ ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ.

ABOUT THE AUTHOR

...view details