ಕರ್ನಾಟಕ

karnataka

By

Published : Oct 1, 2020, 12:16 PM IST

ETV Bharat / state

ಸರಳ ದಸರಾದಲ್ಲಿ ಪಾಲ್ಗೊಳ್ಳಲು ಮೈಸೂರಿನತ್ತ ಹೊರಟ ಗಜಪಡೆ

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬ ದಸರಾ ಮಹೋತ್ಸವ-2020ಅನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ.

Mysore Dasara  Elephants heading towards Mysore
ಮೈಸೂರಿನತ್ತಾ ಹೊರಟ ಗಜಪಡೆ

ಮೈಸೂರು: ಸರಳ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿರುವ ಗಜಪಡೆಗೆ ಪೂಜೆ ಸಲ್ಲಿಸುವ ಮೂಲಕ ವೀರನಹೊಸಹಳ್ಳಿಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು.

ಮೈಸೂರಿನತ್ತ ಹೊರಟ ಗಜಪಡೆ

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬ ದಸರಾ ಮಹೋತ್ಸವ-2020ಅನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ವೀರನಹೊಸಹಳ್ಳಿಯಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಭಿಮನ್ಯು ನೇತೃತ್ವದ ವಿಕ್ರಮ್, ವಿಜಯ, ಗೋಪಿ ಮತ್ತು ಕಾವೇರಿ ಆನೆಗೆ ಸಾಂಪ್ರದಾಯಿಕವಾಗಿ ಜಿಲ್ಲಾಧಿಕಾರಿಗಳ‌ ನೇತೃತ್ವದ ಅಧಿಕಾರಿಗಳ ತಂಡ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಮೊದಲ ಬಾರಿಗೆ ಯಾವುದೇ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿರಲಿಲ್ಲ.

ಮೈಸೂರಿನತ್ತಾ ಹೊರಟ ಗಜಪಡೆ

ಇಂದು ಗಜಪಯಣದ ಮೂಲಕ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿನ ಅರಣ್ಯ ಭವನಕ್ಕೆ ಬರಲಿದ್ದು, ಇಂದು ರಾತ್ರಿ ಅರಣ್ಯ ಭವನದಲ್ಲೇ ಇರಲಿದ್ದು ನಾಳೆ ಬೆಳಗ್ಗೆ ಮೈಸೂರು ಅರಮನೆಯ ಜಯ ಮಾರ್ತಾಂಡಾ ದ್ವಾರಾದ ಮೂಲಕ ಮಧ್ಯಾಹ್ನ 12.08ರಿಂದ 12.40ರವರೆಗಿನ ಶುಭ ಧನುರ್ ಲಗ್ನದಲ್ಲಿ ಗಜಪಡೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅರಮನೆಗೆ ಸ್ವಾಗತ ಮಾಡಲಿದ್ದಾರೆ.

ಮೈಸೂರಿನತ್ತಾ ಹೊರಟ ಗಜಪಡೆ

ABOUT THE AUTHOR

...view details