ಮೈಸೂರು:ಅರಮನೆಯ ಕಲ್ಯಾಣ ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗದಲ್ಲಿ ಮೈಸೂರಿನ ಬಲರಾಮ ಜಟ್ಟಿ ಜಯಶಾಲಿಯಾಗಿದ್ದಾರೆ. ಜಟ್ಟಿ ಕಾಳಗಕ್ಕೆ ನಾಲ್ಕು ಜಟ್ಟಿಗಳು ಸೆಣಸಾಡಿದ್ದು ಅದರಲ್ಲಿ ಮೈಸೂರಿನ ಬಲರಾಮ ಜಟ್ಟಿ, ಚನ್ನಪಟ್ಟಣದ ನರಸಿಂಹ ಜಟ್ಟಿಯೊಂದಿಗೆ ಸೆಣಸಿ ಜಯಶೀಲರಾದರು.
ವಜ್ರ ಮುಷ್ಠಿ ಕಾಳಗದಲ್ಲಿ ಮೈಸೂರಿನ ಬಲರಾಮ ಜಟ್ಟಿಗೆ ಜಯ - mysore palace
ಈ ಬಾರಿಯ ದಸರಾದ ಜಟ್ಟಿ ಕಾಳಗದಲ್ಲಿ ಮೈಸೂರಿನ ಬಲರಾಮ ಜಟ್ಟಿ ಜಯಶೀಲರಾಗಿದ್ದಾರೆ. ಬಲರಾಮ ಜಟ್ಟಿ, ಚನ್ನಪಟ್ಟಣದ ನರಸಿಂಹ ಜಟ್ಟಿಯೊಂದಿಗೆ ಸೆಣಸಿ ಜಯಶೀಲರಾದರು.
ವಜ್ರ ಮುಷ್ಠಿ ಕಾಳಗದಲ್ಲಿ ಮೈಸೂರಿನ ಬಲರಾಮ ಜಟ್ಟಿಗೆ ಜಯ
ಮತ್ತೊಂದು ಜಟ್ಟಿಗಳಾದ ಬೆಂಗಳೂರಿನ ನಾರಾಯಣ ಜಟ್ಟಿ ಹಾಗೂ ಚಾಮರಾಜನಗರದ ಗಿರೀಶ್ ಜಟ್ಟಿಗಳ ನಡುವೆ ನಡೆದ ಕಾಳಗ ಯಾವುದೇ ಫಲಿತಾಂಶ ಕೊಡಲಿಲ್ಲ. ಈ ಜಟ್ಟಿ ಕಾಳಗ ನೋಡಲು ಕಲ್ಯಾಣ ತೊಟ್ಟಿಯಲ್ಲಿ ಜನ ಕಿಕ್ಕಿರಿದು ದೇರಿದ್ದರು. ಇದಕ್ಕೂ ಮುನ್ನ ಉತ್ತರ ಪೂಜೆಯೊಂದಿಗೆ ಜಟ್ಟಿ ಕಾಳಗಕ್ಕೆ ಧಾರ್ಮಿಕ ನಿಶಾನೆ ತೋರಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಂತರ ವಿಜಯಾತ್ರೆ ಕೈಗೊಂಡರು.
Last Updated : Oct 8, 2019, 1:10 PM IST