ಮೈಸೂರು : ಶರನ್ನವರಾತ್ರಿ ಪ್ರಯುಕ್ತ 8ನೇ ದಿನವಾದ ಇಂದು ಅರಮನೆಯಲ್ಲಿ ಆಯುಧ ಪೂಜಾ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ.
ಮೈಸೂರಿನ ಅರಮನೆಯಲ್ಲಿ ಬೆಳಿಗ್ಗೆ 6 ಗಂಟೆಗೆ ಚಂಡಿಕಾ ಹೋಮ ನೇರವೇರಿದೆ. ಅರಮನೆಯ ಆನೆ ಬಾಗಿಲಿಗೆ ಪಟ್ಟದ ಆನೆಗಳು, ಕುದರೆ, ಒಂಟೆ, ಹಸುಗಳು ಆಗಮಿಸಿವೆ.

ಆನೆ ಬಾಗಿಲಿನ ಮೂಲಕ ರಾಜ ಮಹಾರಾಜರು ಉಪಯೋಗಿಸುತ್ತಿದ್ದ ಚಿನ್ನದ ಕತ್ತಿ ಸೇರಿದಂತೆ ಖಾಸಗಿ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಭಾವಿಯಲ್ಲಿ ಸ್ವಚ್ಛಗೊಳಿಸಿ ನಂತರ ಮಂಗಳ ವಾದ್ಯದೊಂದಿಗೆ ಪುನಃ ಆಯುಧಗಳನ್ನು ಅರಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ದರ್ಬಾರ್ ಹಾಲ್ನಲ್ಲಿ ಜೋಡಿಸಿಡಲಾಗಿದೆ.
ನಂತರ ಚಂಡಿಕಾ ಹೋಮವನ್ನು ಪೂರ್ಣಾವತಿಗೊಳಿಸಿ, ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದರೆ, ಹಸುಗೆ ಪೂಜೆ ಸಲ್ಲಿಸಿ, ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆಯನ್ನು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇರವೇರಿಸಲಿದ್ದಾರೆ.