ಮೈಸೂರು: ದಸರಾಗೆ ದಿನಗಣನೆ ಆರಂಭವಾಗುತ್ತಿದ್ದಂತೆ ದಸರಾಗೆ ಸಂಬಂಧಿಸಿದಂತೆ ಚಟುವಟಿಕೆಗಳು ಒಂದೊಂದಾಗಿ ಗರಿಗೆದರುತ್ತಿವೆ.
ಸಾಂಪ್ರದಾಯಿಕ ದಸರಾಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಅರಮನೆಯಂಗಳದಲ್ಲಿ ಕುಶಾಲ ತೋಪು ಸಿಡಿಸುವ ತಾಲೀಮು ನಡೆಸಲು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಿಂದ ಡ್ರೈ ಪ್ರಾಕ್ಟೀಸ್ ನಡೆಸಲಾಯಿತು.
ಅರಮನೆ ಆವರಣದಲ್ಲಿ ಕುಶಾಲ ತೋಪು ತಾಲೀಮು ವಿಜಯ ದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲ ತೋಪು ಸಿಡಿಸಲಾಗುತ್ತದೆ. ಇದಕ್ಕಾಗಿ ಮುಂಚಿತವಾಗಿ ತಾಲೀಮು ನಡೆಸಲು ಸಿಎಆರ್‌ನ 30 ಸಿಬ್ಬಂದಿ ಕುಶಾಲ ತೋಪು ಡ್ರೈ ಪ್ರಾಕ್ಟೀಸ್ಲ್ಲಿ ಭಾಗಿಯಾಗಿದ್ದಾರೆ.
ದಸರಾ ವೇಳೆ ಕುಶಾಲ ತೋಪು ಸಿಡಿಸಲು 7 ಫಿರಂಗಿ ಗಾಡಿಗಳ ಬಳಕೆ ಮಾಡಲಾಗುವುದು. ಆನೆಗಳು, ಕುದುರೆಗಳು ಬೆದರಂತೆ ನೋಡಿಕೊಳ್ಳುವ ಉದ್ದೇಶದಿಂದ ತಾಲೀಮು ನಡೆಸಲಾಗುವುದು.