ಮೈಸೂರು: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ಮಾರ್ಚ್ 1ಕ್ಕೆ ವಿಚಾರಣೆಗೆ ಹಾಜರಾಗುವಂತೆ ನಗರದ ಒಂದನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನೋಟಿಸ್ ನೀಡಿದೆ.
ಮೈಸೂರಿನ ನಿವಾಸಿ , ಅನಿಮಲ್ ವೆಲ್ ಫೇರ್ ಬೋರ್ಡ್ ಆಫ್ ಇಂಡಿಯಾದ ಸದಸ್ಯ ಡಾ.ಎಸ್.ಕೆ. ಮಿತ್ತಲ್ ಅವರು ಕರ್ನಾಟಕ ಮತ್ತು ಕೇರಳ ರಾಜ್ಯ ಉಸ್ತುವಾರಿ ಆಗಿದ್ದರು. ಈ ವೇಳೆ ಕಸಾಯಿಖಾನೆ ಭೇಟಿ ಸೇರಿದಂತೆ ಸಾಕಷ್ಟು ಕಾರ್ಯಗಳಲ್ಲಿ ಮಿತ್ತಲ್ ಅವರು ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಮನೇಕಾ ಗಾಂಧಿ ಆರೋಪ ಮಾಡಿದ್ದರು. ಅಲ್ಲದೇ ಈ ಸಂಬಂಧ ಅಂದಿನ ಕೇಂದ್ರದ ಪರಿಸರ ಸಚಿವರಾಗಿದ್ದ ಡಾ. ಹರ್ಷವರ್ಧನ್ ಅವರಿಗೆ ಪತ್ರವನ್ನೂ ಬರೆದು ಮಂಡಳಿಯ ಸದಸ್ಯರ ವಿರುದ್ಧ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಎಸ್.ಕೆ.ಮಿತ್ತಲ್ ಅವರು , ಮನೇಕಾ ಗಾಂಧಿ ಅವರಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದರು.
ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿಗೆ ಮೈಸೂರು ಕೋರ್ಟ್ನಿಂದ ನೋಟಿಸ್ ಜಾರಿ - ಮನೇಕಾ ಗಾಂಧಿಗೆ ಕೋರ್ಟ್ ನೋಟಿಸ್
ಅನಿಮಲ್ ವೆಲ್ ಫೇರ್ ಬೋರ್ಡ್ ಆಫ್ ಇಂಡಿಯಾದ ಸದಸ್ಯ ಡಾ.ಎಸ್.ಕೆ. ಮಿತ್ತಲ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನೋಟಿಸ್ ನೀಡಿದೆ.

ಮಾಜಿ ಕೇಂದ್ರ ಮನೇಕಾ ಗಾಂಧಿಗೆ ಮೈಸೂರು ಕೋರ್ಟ್ನಿಂದ ನೋಟಿಸ್ ಜಾರಿ
ಆದರೂ , ಮನೇಕಾ ಆರೋಪ ಮಾಡುವುದನ್ನು ಮುಂದುವರಿಸಿದ್ರು. ಇದರಿಂದ ಬೇಸರಗೊಂಡ ಮಿತ್ತಲ್ ಅವರು ಮೈಸೂರಿನ ಒಂದನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ, ನ್ಯಾಯಾಲಯವು ಅವರ ಅರ್ಜಿಯನ್ನು ವಜಾ ಮಾಡಿತ್ತು. ನಂತರ ಅವರು ಒಂದನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮೊರೆ ಹೋದರು, ಪ್ರಕರಣ ದಾಖಲಿಸಿಕೊಂಡು ಮನೇಕಾ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಮಿತ್ತಲ್ ಪರ್ ವಕೀಲ ಎಚ್.ಬಿ ಪ್ರಭು ತಿಳಿಸಿದ್ದಾರೆ.
Last Updated : Feb 8, 2021, 2:45 PM IST