ಮೈಸೂರು: ಜಿಲ್ಲೆಯಲ್ಲಿ 361 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 4 ಜನ ಸಾವನ್ನಪ್ಪಿದ್ದಾರೆ. 152 ಜನ ಗುಣಮುಖರಾಗಿದ್ದಾರೆ.
ಮೈಸೂರು : 361 ಸೋಂಕಿತ ಪ್ರಕರಣಗಳು ಪತ್ತೆ , 4 ಸಾವು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂದು 361 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 6476ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 4 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್
ಜಿಲ್ಲೆಯ ಒಟ್ಟು ಸೋಂಕಿತ ಪ್ರಕರಣಗಳು 6476. ಅದರಲ್ಲಿ 2494 ಜನ ಗುಣಮುಖರಾಗಿದ್ದಾರೆ. 3784 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 198 ಮಂದಿ ಮರಣ ಹೊಂದಿದ್ದಾರೆ.
ಸಾವಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.