ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಹೊಡೀತು ಎಪಿಎಂಸಿ ಅಧ್ಯಕ್ಷ ಸ್ಥಾನದ 'ಲಾಟರಿ'!! - Appointment of President to APMC

ಇಲ್ಲಿನ ಎಪಿಎಂಸಿಯಲ್ಲಿ ಒಟ್ಟು 16 ಸದಸ್ಯರಿದ್ದರು. ಅದರಲ್ಲಿ 6 ಕಾಂಗ್ರೆಸ್ ಬೆಂಬಲಿತ, 6 ಜೆಡಿಎಸ್​ ಬೆಂಬಲಿತ, 3 ನಾಮ ನಿರ್ದೇಶಿತ ಹಾಗೂ ಒಬ್ಬರು ವರ್ತಕ ಕ್ಷೇತ್ರದ ಸದಸ್ಯರನ್ನು ಹೊಂದಿದೆ..

Mysore: Congress wins APMC president post by lottery
ಮೈಸೂರು: ಲಾಟರಿ ಮೂಲಕ ಎಪಿಎಂಸಿ ಅಧ್ಯಕ್ಷ ಸ್ಥಾನ ಗೆದ್ದುಕೊಂಡ ಕಾಂಗ್ರೆಸ್​​​

By

Published : Jun 26, 2020, 5:47 PM IST

ಮೈಸೂರು :ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​ ನಡುವೆ ಸಮಾನ ಮತ ಬಂದು ಲಾಟರಿ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದರು.

ಕಾಂಗ್ರೆಸ್‌ಗೆ ಹೊಡೀತುಎಪಿಎಂಸಿ ಅಧ್ಯಕ್ಷ ಸ್ಥಾನದ 'ಲಾಟರಿ'!​!​​

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಸವರಾಜ್ ಅಧ್ಯಕ್ಷರಾಗಿ ಆಯ್ಕೆಯಾದರು. ಇಲ್ಲಿನ ಎಪಿಎಂಸಿಯಲ್ಲಿ ಒಟ್ಟು 16 ಸದಸ್ಯರಿದ್ದರು. ಅದರಲ್ಲಿ 6 ಕಾಂಗ್ರೆಸ್ ಬೆಂಬಲಿತ, 6 ಜೆಡಿಎಸ್​ ಬೆಂಬಲಿತ, 3 ನಾಮ ನಿರ್ದೇಶಿತ ಹಾಗೂ ಒಬ್ಬರು ವರ್ತಕ ಕ್ಷೇತ್ರದ ಸದಸ್ಯರನ್ನು ಹೊಂದಿದೆ.

ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬಸವರಾಜ್, ಜೆಡಿಎಸ್ ಬೆಂಬಲಿತ ನಾಗರಾಜ್ 8 ಮತಗಳನ್ನು ಗಳಿಸಿದರು. ಇಬ್ಬರು ಸಮಾನವಾಗಿ ಮತ ತೆಗೆದುಕೊಂಡಿರುವುದರಿಂದ ಲಾಟರಿ ಎತ್ತಲಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಸವರಾಜ್ ಆಯ್ಕೆಯಾದರು. ಜೆಡಿಎಸ್‌ ಬೆಂಬಲಿತ ನಾಗರಾಜ್ ಉಪಧ್ಯಾಕ್ಷರಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಕಾಂಗ್ರೆಸ್​​ನ ಕಾರ್ಯಕರ್ತರು ಅಧ್ಯಕ್ಷರಿಗೆ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ABOUT THE AUTHOR

...view details