ಮೈಸೂರು:ಚಿರತೆ ದಾಳಿಯಿಂದ ಮೃತಪಟ್ಟ ಯುವತಿ ಮೇಘನಾ ಕುಟುಂಬಕ್ಕೆ 7 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಚಿರತೆಗೆ ಶೂಟೌಟ್ ಮಾಡಲು ಸರ್ಕಾರದಿಂದ ಆದೇಶವೂ ಸಿಕ್ಕಿದೆ ಎಂದು ಮೈಸೂರು ವೃತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ ಹೇಳಿದರು.
ಕಳೆದ ಮಧ್ಯರಾತ್ರಿ 12ರ ತನಕ ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಮಾಲತಿ ಪ್ರಿಯಾ, ಮೃತ ಯುವತಿಯ ಕುಟುಂಬಕ್ಕೆ ಏಳೂವರೆ ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಕುಟುಂಬದ ಓರ್ವರಿಗೆ ಹೊರಗುತ್ತಿಗೆ ಆಧಾರದಲ್ಲಿ ಮೇಲೆ ಕೆಲಸ ನೀಡುತ್ತೇವೆ ಎಂದರು.