ಕರ್ನಾಟಕ

karnataka

ETV Bharat / state

ಮೈಸೂರು: ಚಿರತೆ ದಾಳಿಗೆ ಬಲಿಯಾದ ಕರು - Mysore

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ನೇರಳೆ ಹೊಸೂರು ಗ್ರಾಮದ ರೈತ ಮಹೇಶ್ ಎಂಬುವರಿಗೆ ಸೇರಿದ ಕರುvವೊಂದು ಚಿರತೆ ದಾಳಿಯಿಂದ ಸಾವನ್ನಪ್ಪಿದೆ.

death calf
ಚಿರತೆ ದಾಳಿಗೆ ಕರು ಬಲಿ

By

Published : Jun 14, 2020, 1:10 PM IST

ಮೈಸೂರು: ಹಾಡಹಗಲೇ ಚಿರತೆ ದಾಳಿಗೆ ಕರು ಬಲಿಯಾಗಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ನೇರಳೆ ಹೊಸೂರು ಗ್ರಾಮದಲ್ಲಿ ನಡೆದಿದೆ.

ಚಿರತೆ ದಾಳಿಗೆ ಕರು ಬಲಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ನೇರಳೆ ಹೊಸೂರು ಗ್ರಾಮದ ರೈತ ಮಹೇಶ್ ಎಂಬುವರಿಗೆ ಸೇರಿದ ಕರು ಹೊಲದಲ್ಲಿ ಮೇಯುತ್ತಿರುವಾಗ ಹಾಡಹಗಲೇ ದಾಳಿ ಮಾಡಿದ ಚಿರತೆ ಕರುವನ್ನು ಬಲಿ ಪಡೆದಿದೆ. ಕಾಡಂಚಿನ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಬಳಿಕ ಚಿರತೆ ಸೆರೆಗೆ ಬೋನ್ ಇಡಲು ತೀರ್ಮಾನಿಸಿದ್ದಾರೆ.

ABOUT THE AUTHOR

...view details