ಮೈಸೂರು:ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಅಡಿಯಲ್ಲಿ ಆರಂಭವಾದ ವಿಮಾನಯಾನ ಇಂದು ಅತಿ ಹೆಚ್ಚು ಪ್ರಯಾಣಿಕರನ್ನು ಸೆಳೆಯುತ್ತಿದ್ದು, ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯವಾಗಿದೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ಹೊಸ ಉಡಾನ್ ಯೋಜನೆಯು ಯಶ್ವಸಿಯಾಗಿದ್ದು , ಇದರಿಂದ ವಿಮಾನದ ಮೂಲಕ ಮೈಸೂರಿಗೆ ಬರುವವರು ಹಾಗೂ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮೈಸೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ , ಗೋವಾ, ಬೆಳಗಾವಿ, ಕಲಬುರಗಿ ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ಸೇವೆ ದೊರೆಯುತ್ತಿದೆ. ಇದು ಸಂತಸದ ವಿಷಯ ಎಂದು ವಿಮಾನ ನಿಲ್ದಾಣ ನಿರ್ದೇಶಕ ಮಂಜುನಾಥ್ ತಿಳಿಸಿದರು.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಮೈಸೂರು ಮಂಡಕಳ್ಳಿ ವಿಮಾನ ಯಾನ ಈ ಬಗ್ಗೆ ವಿವರಿಸಿದ ವಿಮಾನ ನಿಲ್ದಾಣದ ನಿರ್ದೇಶಕರು
ಈ ಬಗ್ಗೆ ಕೆಲವು ಮಾಹಿತಿ ನೀಡಿದ ನಿರ್ದೇಶಕರು 2019 ಏಪ್ರಿಲ್ ನಿಂದ ಡಿಸೆಂಬರ್ ವರೆಗೆ 99,991 ಪ್ರಯಾಣಿಕರು ಮೈಸೂರು ನಿಲ್ದಾಣವನ್ನು ಬಳಕೆ ಮಾಡಿದ್ದು, ಕಳೆದ ವರ್ಷ 2018 ರಲ್ಲಿ ಡಿಸೆಂಬರ್ ನಲ್ಲಿ ಕೇವಲ 3,652 ಪ್ರಯಾಣಿಕರು ಮಾತ್ರ ವಿಮಾನ ಬಳಕೆ ಮಾಡಿದ್ದರು. ಆದರೆ 2019 ರ ಡಿಸೆಂಬರ್ ತಿಂಗಳಲ್ಲಿ 19,847, ಮಂದಿ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಪ್ರಯಾಣಿಕರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಪಾರ್ಕಿಂಗ್, ಟ್ಯಾಕ್ಸಿ ಸೌಲಭ್ಯ ಒದಗಿಸಲಾಗುತ್ತಿದೆ. ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು ಸಂತಸ ವ್ಯಕ್ತಪಡಿಸಿದರು.