ಕರ್ನಾಟಕ

karnataka

ETV Bharat / state

ಪೊಲೀಸ್​ ಲಾಠಿಗೆ ಸಿಲುಕಿ ಬೈಕ್​ ಸವಾರ ಸಾವು:  ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಹಿಂಬದಿ ಸವಾರನ ಹೇಳಿಕೆ.! - Mysore accident news

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸರ ತಪಾಸಣೆ ವೇಳೆ ಹಿಂಬದಿ ಸವಾರ ಸುರೇಶ್, ಪೊಲೀಸರು ನಮ್ಮನ್ನ ತಡೆಯಲಿಲ್ಲ ಎಂದು ಹೇಳಿದ್ದಾರೆ.

ಪೊಲೀಸ್​ ಲಾಠಿ ಸಿಲುಕಿ ಬೈಕ್​ ಸವಾರ ಸಾವು ಪ್ರಕರಣ
ಪೊಲೀಸ್​ ಲಾಠಿ ಸಿಲುಕಿ ಬೈಕ್​ ಸವಾರ ಸಾವು ಪ್ರಕರಣ

By

Published : Mar 23, 2021, 8:32 AM IST

Updated : Mar 23, 2021, 9:27 AM IST

ಮೈಸೂರು:ಸಂಚಾರಿ ಪೊಲೀಸ್ ತಪಾಸಣೆ ವೇಳೆ ಹ್ಯಾಂಡಲ್​​ಗೆ ಲಾಠಿ ಸಿಲುಕಿ ಯುವಕನೋರ್ವ ಮೃತಪಟ್ಟಿದ್ದ ಘಟನೆ ನಗರದ ಹಿನ್​ಕಲ್ ನಲ್ಲಿ ನಿನ್ನೆ ನಡೆದಿದೆ.

ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಹಿಂಬದಿ ಸವಾರನ ಹೇಳಿಕೆ

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸರ ತಪಾಸಣೆ ವೇಳೆ ಹಿಂಬದಿ ಸವಾರ ಸುರೇಶ್, ಪೊಲೀಸರು ನಮ್ಮನ್ನ ತಡೆಯಲಿಲ್ಲ. ದೇವರಾಜ್ ಅವರೇ ಬೈಕ್‌ ಸ್ಲೋ ಮಾಡಿದ್ರು. ಆಗ ಹಿಂಬದಿಯಿಂದ ಬಂದ ಟಿಪ್ಪರ್ ನಮಗೆ ಡಿಕ್ಕಿಯಾಗಿದೆ. ಇದರಿಂದ ಅಪಘಾತ ಸಂಭವಿಸಿತು ಎಂದು ಹೇಳಿದ್ದಾರೆ.

ಪೊಲೀಸರು ನಮ್ಮನ್ನ ಸ್ಪರ್ಶಿಸಲೇ ಇಲ್ಲ. ಬೈಕ್‌ ಹಿಡಿಯುತ್ತಿದ್ದುದ್ದನ್ನ‌ ಕಂಡು ಇವರು ಸ್ಲೋ ಮಾಡಿದ್ರು. ಆಗ ಹಿಂದಿನಿಂದ ಟಿಪ್ಪರ್ ಬಂದು ಡಿಕ್ಕಿ ಹೊಡೀತು. ನಾನು ಕೆಳಗೆ ಬಿದ್ದಿದ್ದು, ಮಾತ್ರ ನೆನಪಿದೆ. ಆಮೇಲೆ ನೋಡಿದ್ರೆ ಅಪಘಾತ ಆಗಿ ಜನ ಸೇರಿದ್ರು. ಘಟನೆಗೆ ಪೊಲೀಸರು ಕಾರಣವಲ್ಲ ಎಂದಿದ್ದಾರೆ.

ಇದನ್ನೂ ಓದಿ:ಪೊಲೀಸ್​ ಲಾಠಿ ಸಿಲುಕಿ ಬೈಕ್​ ಸವಾರ ಸಾವು: ರೊಚ್ಚಿಗೆದ್ದ ಸಾರ್ವಜನಿಕರಿಂದ ಪೊಲೀಸರಿಗೆ ಧರ್ಮದೇಟು

ಘಟನೆ ಹಿನ್ನೆಲೆ: ನಿನ್ನೆ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಹಿನಕಲ್ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದಾಗ, ಬೈಕ್ ಸವಾರ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಹ್ಯಾಂಡಲ್​ಗೆ ಪೊಲೀಸ್​ ಲಾಠಿ ಸಿಲುಕಿ ಆಯತಪ್ಪಿ ಬಿದ್ದಿದ್ದಾನೆ‌. ಈ ವೇಳೆ ಹಿಂಬದಿಯಿಂದ ಬಂದ ವ್ಯಾನ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಕೆರಳಿದ ಸಾರ್ವಜನಿಕರು ಪೊಲೀಸ್ ಗಸ್ತು ವಾಹನ ಜಖಂಗೊಳಿಸಿ, ಪೊಲೀಸರನ್ನು ಅಟ್ಟಾಡಿಸಿ ಹೊಡೆದಿದ್ದರು.

Last Updated : Mar 23, 2021, 9:27 AM IST

ABOUT THE AUTHOR

...view details