ಮೈಸೂರು:ಪತಿ ಬುದ್ಧಿ ಹೇಳಿದ್ದಕ್ಕೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಮೈಸೂರಿನ ವಿಜಯನಗರ ಬಡಾವಣೆ 4ನೇ ಹಂತದ ನಿವಾಸಿ ಅಭಿಷೇಕ್ ಎಂಬುವರ ಪತ್ನಿ ನಂದಿನಿ (28) ಆತ್ಮಹತ್ಯೆ ಮಾಡಿಕೊಂಡವರು. ಚಿಕ್ಕಮಗಳೂರಿನ ನಿವಾಸಿಯಾದ ನಂದಿನಿ, 5 ವರ್ಷಗಳ ಹಿಂದೆ ಮೈಸೂರಿನ ಅಭಿಷೇಕ್ನನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು.