ಮೈಸೂರು:ತಂದೆಯ ಪಿಂಡ ಪ್ರದಾನ ಮಾಡುವ ಸಂದರ್ಭದಲ್ಲಿ ನಾಲೆಗೆ ಜಾರಿಬಿದ್ದು ಕೊಚ್ಚಿ ಹೋದ ಮಗ ಹೆಣವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ವರುಣಾ ನಾಲೆಯ ಬಳಿ ನಡೆದಿದೆ.
ಶ್ರೀನಿವಾಸ ಸೀರ್ಪು ಮೃತ ವ್ಯಕ್ತಿ. ಇವರು ಇತ್ತಿಚೆಗೆ ನಿಧನರಾಗಿದ್ದ ತನ್ನ ತಂದೆಯ ಪಿಂಡ ಪ್ರದಾನ ಕಾರ್ಯ ಮಾಡಲೆಂದು ಕುಟುಂಬ ಸಮೇತ ತಿ.ನರಸೀಪುರ ರಸ್ತೆ ಚಿಕ್ಕಳ್ಳಿ ಬಳಿಯ ವರುಣಾ ನಾಲೆಗೆ ಹೋಗಿದ್ದರು. ಅವರು ನಾಲೆಗೆ ಪಿಂಡ ಪ್ರದಾನ ಮಾಡಿ ವಾಪಸ್ ಹಿಂತಿರುವಾಗ ಕಾಲು ಜಾರಿ ನಾಲೆಯ ನೀರಿಗೆ ಬಿದ್ದಿದ್ದಾರೆ. ನೀರಿನ ರಭಸ ಹೆಚ್ಚಾಗಿದ್ದಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾರೆ.