ಮೈಸೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ ಮೃತಪಟ್ಟಿರುವ ಹಿನ್ನೆಲೆ ಮೈಸೂರು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡಲು ಬಂದ ಬಿಜೆಪಿ ಹಾಗೂ ರೈತ ಮುಖಂಡ ವಾಪಸ್ ಹೋಗಿರುವ ಘಟನೆ ಕಂಡು ಬಂತು.
ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡಲು ಬಂದು ವಾಪಸ್ ಹೋದ ಬಿಜೆಪಿ ಮುಖಂಡ - ರೋಹಿಣಿ ಸಿಂಧೂರಿ,
ಬಿಜೆಪಿ ಮುಖಂಡರೊಬ್ಬರು ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡಲು ಬಂದು ವಾಪಸ್ ಹೋದ ಘಟನೆ ಮೈಸೂರಿನಲ್ಲಿ ನಡೆಯಿತು.
![ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡಲು ಬಂದು ವಾಪಸ್ ಹೋದ ಬಿಜೆಪಿ ಮುಖಂಡ BJP leader come back to complain, BJP leader come back to complain against Rohini Sindhuri, Rohini Sindhuri, Rohini Sindhuri news, ದೂರು ನೀಡಲು ಬಂದ ವಾಪಸ್ ಹೋದ ಬಿಜೆಪಿ ಮುಖಂಡ, ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡಲು ಬಂದ ವಾಪಸ್ ಹೋದ ಬಿಜೆಪಿ ಮುಖಂಡ, ರೋಹಿಣಿ ಸಿಂಧೂರಿ, ರೋಹಿಣಿ ಸಿಂಧೂರಿ ಸುದ್ದಿ,](https://etvbharatimages.akamaized.net/etvbharat/prod-images/768-512-12196062-463-12196062-1624124084595.jpg)
ಚಾಮರಾಜನಗರ ಜಿಲ್ಲೆಯ ಬಿಜೆಪಿ ಹಾಗೂ ರೈತ ಮುಖಂಡರಾದ ಮಲ್ಲೇಶ್, ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ( ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಮೃತಪಟ್ಟ ಘಟನೆ ವಿವರ ಪಡೆಯಲು ಸರ್ಕಾರ ರಚಿಸಿಸುವ ಸಮಿತಿ ಅಧ್ಯಕ್ಷರು) ರಿಗೆ ದೂರು ನೀಡಲು ಬಂದಿದ್ದಾರೆ. ಆದ್ರೆ ದೂರು ಸ್ವೀಕರಿಸಲು ಯಾರು ಇಲ್ಲದೇ ಇದ್ದದರಿಂದ ವಾಪಸ್ ಹೋಗಿದ್ದಾರೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲೇಶ್, ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಮೃತಪಟ್ಟವರದು ಸಾವಲ್ಲ. ಅದು ಕೊಲೆ. ರೋಹಿಣಿ ಸಿಂಧೂರಿ ಅವರ ಕರ್ತವ್ಯ ಲೋಪ ಹಾಗೂ ದುರಂಹಕಾರದಿಂದ ಜನ ಸಾವನ್ನಪ್ಪಿದ್ದಾರೆ. ಇದರ ದಾಖಲೆ ಹಾಗೂ ಆಡಿಯೋ ನೀಡಲು ಬಂದಿದ್ದೆ. ಆದರೆ, ಬಾಗಿಲು ಹಾಕಿದ್ದು, ಮತ್ತೆ ಸೋಮವಾರ ಬರುತ್ತೀನಿ ಎಂದು ಬೇಸರದಿಂದ ಹೇಳಿದರು.