ಕರ್ನಾಟಕ

karnataka

ETV Bharat / state

ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲಾಗಿಲ್ಲ: ಮೈಸೂರು ಡಿಹೆಚ್​​ಒ ಅಸಹಾಯಕತೆ - ಮೈಸೂರು ಡಿಹೆಚ್ ಒ ಫೋನ್ ಕಾಲ್

ರೋಗಿ ಸಂಬಂಧಿಕರ ಜತೆ ಮಾತನಾಡಿರುವ ಫೋನ್ ಸಂಭಾಷಣೆ ಆಡಿಯೋ ವೈರಲ್ ಆಗಿದ್ದು, ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದ ವ್ಯಕ್ತಿಗೆ ವಾರ್ ರೂಂಗೆ ಕರೆ‌ ಮಾಡಿ ಅಲ್ಲಿ ಅರೇಂಜ್ ಮಾಡಿಕೊಡುತ್ತಾರೆ ಎಂದು ಡಿಹೆಚ್​​ಒ ಡಾ. ಅಮರನಾಥ್ ಹೇಳಿದ್ದಾರೆ.

Dho
Dho

By

Published : May 6, 2021, 2:58 PM IST

ಮೈಸೂರು: ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ.ಅಮರನಾಥ್ ಅಸಹಾಯಕತೆ ವ್ಯಕ್ತಪಡಿಸಿರುವ ಆಡಿಯೋ ಒಂದು ವೈರಲ್ ಆಗಿದೆ.

ರೋಗಿ ಸಂಬಂಧಿಕರ ಜತೆ ಮಾತನಾಡಿರುವ ಫೋನ್ ಸಂಭಾಷಣೆ ಆಡಿಯೋ ವೈರಲ್ ಆಗಿದ್ದು, ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದ ವ್ಯಕ್ತಿಗೆ ವಾರ್ ರೂಂಗೆ ಕರೆ‌ ಮಾಡಿ ಅಲ್ಲಿ ಅರೇಂಜ್ ಮಾಡಿಕೊಡುತ್ತಾರೆ ಎಂದು ಅಮರನಾಥ್ ಹೇಳಿದ್ದಾರೆ.

ಅವರು ರೆಸ್ಪಾಂಡ್ ಮಾಡುತ್ತಿಲ್ಲ ಎಂದು ರೋಗಿ ಸಂಬಂಧಿ ಹೇಳಿದರೆ, ಬೆಡ್​ಗೂ, ನನಗೂ ಸಂಬಂಧ ಇಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ, ನನ್ನ ಹೆಂಡತಿಗೂ ಬೆಡ್ ಕೊಡಿಸಲು ಆಗಿಲ್ಲ. ನನ್ನ ಕೈ ಸೋತೋಗಿದೆ‌ ಎಂದು ಅಸಹಾಯಕತೆ ಹೊರಹಾಕಿದ್ದಾರೆ.

ನಿಮಗೆ ಈ ಜವಾಬ್ದಾರಿ ಏಕೆ, ಕೆಲಸ ಬಿಟ್ಟೋಗಿ ಎಂದು ಆ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ ವೇಳೆ, ಕೆಲಸದಿಂದ ಕಳುಹಿಸಿದರೆ ಬಿಟ್ಟೋಗಲು ರೆಡಿ ಇದ್ದೇನೆ.

ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ, ನಾನು‌ ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details