ಮೈಸೂರು:ಇದು ನನ್ನ ಕೊನೆಯ ಚುನಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಯತೀಂದ್ರ ಜತೆಗೆ ಧವನ್ ವಿದ್ಯಾಭ್ಯಾಸದ ನಂತರ ನಿಮ್ಮ ಸೇವೆಗೆ ಬರುತ್ತಾನೆ. ದಿವಂಗತ ರಾಕೇಶ್ ಮೇಲೆ ಜನರು ಪ್ರೀತಿ ಇಟ್ಟಿದ್ದರು. ಅದೇ ರೀತಿ ಅವನ ಮಗ ಧವನ್ ರಾಕೇಶ್ ಮೇಲೂ ಜನರಿಗೆ ಪ್ರೀತಿಯಿದೆ ಎಂದು ನಂಜನಗೂಡಿನ ಸಭೆಯಲ್ಲಿಂದು ಸಿದ್ದರಾಮಯ್ಯ ಪರಿಚಯಿಸಿದರು.
ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಂಜನಗೂಡು ಹೊರವಲಯದ ಗೋಳೂರಿನ ಬಳಿ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಧವನ್ ರಾಕೇಶ್ ಅವರನ್ನು ಸಮಾವೇಶದಲ್ಲಿ ಜನರಿಗೆ ಪರಿಚಯ ಮಾಡಿಕೊಟ್ಟರು. ವೇದಿಕೆ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಧವನ್ ರಾಕೇಶ್‌ನನ್ನು ಕರೆದು, ಮೊಮ್ಮಗ ಧವನ್ ಭವಿಷ್ಯದ ವರುಣ ಕ್ಷೇತ್ರದ ನಾಯಕ, ಇವನು ನನ್ನ ಉತ್ತರಾಧಿಕಾರಿ. ಇದು ನನ್ನ ಕೊನೆಯ ಚುನಾವಣೆ. ಮುಂದಿನ ದಿನಗಳಲ್ಲಿ ಯತೀಂದ್ರರೊಂದಿಗೆ ರಾಜಕೀಯದಲ್ಲಿ ಇರುತ್ತಾರೆ ಎಂದು ತಿಳಿಸಿದರು.
ಧವನ್‌ಗೆ ಈಗ 17 ವರ್ಷ. ವಿದ್ಯಾಭ್ಯಾಸ ಮುಗಿಸಿಕೊಂಡು ನಿಮ್ಮ ಸೇವೆಗೆ ಬರುತ್ತಾನೆ. ರಾಕೇಶ್ ಮೇಲೆ ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಜನರು ಪ್ರೀತಿ ಇಟ್ಟಿದ್ದರು. ಅದೇ ರೀತಿ ಪ್ರೀತಿ ಮೊಮ್ಮಗನ ಮೇಲೂ ಇದೆ. ದಯವಿಟ್ಟು ತಾವು ಆಶೀರ್ವಾದ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.