ಕರ್ನಾಟಕ

karnataka

ETV Bharat / state

ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಸಿಸ್ಟರ್​ಗೆ ಕೊಲೆ ಬೆದರಿಕೆ: ವಿಡಿಯೋ ಮೂಲಕ ರಕ್ಷಣೆಗಾಗಿ ಮನವಿ - Murder threat to convent Sisters of Mercy

ಮರ್ಸಿ ಕಾನ್ವೆಂಟ್​ನ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಸಿಸ್ಟರ್​ ವಿಲ್ಸೇನಾ ಅವರಿಗೆ ಅವರ ಸಹೋದ್ಯೋಗಿಗಳು ಕೊಲೆ ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಅವರು ವಿಡಿಯೋ ಮೂಲಕ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ವಿಡಿಯೋ ಮೂಲಕ ರಕ್ಷಣೆಗಾಗಿ ಮನವಿ
ವಿಡಿಯೋ ಮೂಲಕ ರಕ್ಷಣೆಗಾಗಿ ಮನವಿ

By

Published : Jun 6, 2022, 10:37 PM IST

ಮೈಸೂರು:ವಿಶೇಷ ಚೇತನ ಮಕ್ಕಳ ಕಾನ್ವೆಂಟ್​ನ ಅಕ್ರಮಗಳ ಬಗ್ಗೆ ಮಾತನಾಡಿದ್ದಕ್ಕೆ ಸುಧಾ ಕೆವಿ ಅಲಿಯಾಸ್ ಸಿಸ್ಟರ್ ವಿಲ್ಸೇನಾ ಅವರ ಮೇಲೆ ಸಹೋದ್ಯೋಗಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿಸ್ಟರ್ ವಿಲ್ಸೇನಾ ಅವರು ತಮಗೆ ರಕ್ಷಣೆ ನೀಡುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ವಿಡಿಯೋ ಮೂಲಕ ರಕ್ಷಣೆಗಾಗಿ ಮನವಿ ಮಾಡಿದ ಮರ್ಸಿ ಕಾನ್ವೆಂಟ್ ಸಿಸ್ಟರ್​

ನಗರದ ಶ್ರೀರಾಂಪುರ ಎರಡನೇ ಹಂತದಲ್ಲಿರುವ ಮರ್ಸಿ ಕಾನ್ವೆಂಟ್​ನಲ್ಲಿ ಕಳೆದ 25 ವರ್ಷಗಳಿಂದ ಸಿಸ್ಟರ್ ವಿಲ್ಸೇನಾ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಸಂಸ್ಥೆಯಲ್ಲಿನ ಉದ್ಯೋಗಿಗಳು 2 ಬಣವಾಗಿ ಒಡೆದಿದ್ದು, ನಾನು ಸಂಸ್ಥೆಯ ಅಕ್ರಮಗಳ ಬಗ್ಗೆ ಮಾತನಾಡಿದ್ದಕ್ಕೆ ಎದುರಾಳಿ ಬಣದ ಸಿಸ್ಟರ್ ದೀಪ, ಸಿಸ್ಟರ್ ಮಾರ್ಗರೇಟ್, ಸಿಸ್ಟರ್ ಆನ್ಮೇರಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ ತನ್ನನ್ನು ರಕ್ಷಣೆ ಮಾಡುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಪೊಲೀಸರಿಗೆ ನೀಡಿದ ದೂರಿನ ಪ್ರತಿ

ವಿಡಿಯೋದಲ್ಲಿ ನನಗೆ ಯಾವುದೇ ತೊಂದರೆಗಳಿಲ್ಲ, ನಾನು ಆರೋಗ್ಯವಾಗಿಯೇ ಇದ್ದೇನೆ. ಮಾನಸಿಕವಾಗಿಯೂ ಕೂಡ ಸದೃಢಳಾಗಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಮಾನಸಿಕವಾಗಿ ಸರಿಯಿಲ್ಲ ಎಂದು ಆಸ್ಪತ್ರೆಗೂ ಸಹ ಸೇರಿಸಬಹುದು ಅಥವಾ ನಾನು ಕಾಣೆಯಾಗಿದ್ದೇನೆ, ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಹೇಳಬಹುದು. ಆದ್ರೆ ಆತ್ಮಹತ್ಯೆಯಾಗಿರಲ್ಲ, ಕೊಲೆಯಾಗಿರುತ್ತದೆ. ದಯಮಾಡಿ ಎಲ್ಲರೂ ನನಗೆ ರಕ್ಷಣೆ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ. ಈ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಕೂಡ ಅವರು ಪತ್ರವನ್ನು ಬರೆದಿದ್ದಾರೆ.

ಇದನ್ನೂ ಓದಿ:ನಾನು ಮೊದಲಿಂದಲೂ ಆರ್​​ಎಸ್​ಎಸ್ ವಿರೋಧಿ: ಸಿದ್ದರಾಮಯ್ಯ ಕಿಡಿ

ಪತ್ರದ ನಂತರ ಹಲ್ಲೆ:ಬೆಂಗಳೂರಿನ ಮಾನವ ಹಕ್ಕು ಆಯೋಗಕ್ಕೆ ಮರ್ಸಿ ಕಾನ್ವೆಂಟ್​ನಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಪತ್ರ ಬರೆದ ನಂತರ, ಕಳೆದ ತಿಂಗಳ 31 ರ ಸಂಜೆ ಮೂರು ಜನ ಪುರುಷರು ಈಕೆಯ ಮೇಲೆ ಹಲ್ಲೆ ನಡೆಸಿ ಕೈ ಕಾಲು ಸ್ವಾಧೀನ ಕಳೆದುಕೊಳ್ಳುವ ಇಂಜೆಕ್ಷನ್ ನೀಡಿ, ಅಲ್ಲೇ ಇದ್ದ ಸೇಂಟ್ ಮೇರಿ ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಅಲ್ಲಿ ತಮ್ಮ ಸಂಬಂಧಿಕರು ಹಾಗೂ ತಂದೆಯ ಸಹಾಯದಿಂದ ಬಚಾವಾಗಿ ಬಂದು ಕಳೆದ ಎರಡು ದಿನಗಳ ಹಿಂದೆ ಅಶೋಕ ಪುರಂ ಪೊಲೀಸ್ ಠಾಣೆಯಲ್ಲಿ ತನ್ನ ಮೇಲಾದ ಹಲ್ಲೆಯ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿ ತನಿಖೆ ಕೈಗೊಂಡಿದ್ದಾರೆ. ತಮಗಾದ ಹಲ್ಲೆಯ ಬಗ್ಗೆ ಸಿಸ್ಟರ್ ವಿಲ್ಸೇನಾ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details