ಮೈಸೂರು: ಜಮೀನು ವಿವಾದದ ಸಂಬಂಧ ಸಹೋದರರ ನಡುವೆ ಆರಂಭವಾದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.
ಆಸ್ತಿ ವಿವಾದ: ಅಣ್ಣನನ್ನೇ ಕೊಂದ ತಮ್ಮ - ಎಚ್.ಡಿ. ಕೋಟೆ ಪೊಲೀಸ್ ಠಾಣೆ
ಜಮೀನು ವಿವಾದ ಸಂಬಂಧ ಸಹೋದರರ ನಡುವೆ ಆರಂಭವಾದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.
ಆಸ್ತಿ ವಿವಾದದಲ್ಲಿ ಅಣ್ಣನನ್ನೆ ಕೊಂದ ತಮ್ಮ
ಮಾದೇಗೌಡ ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಗಂಗಾಧರ್ನನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ವರ್ಷಗಳಿಂದ ಜಮೀನಿನ ವಿಚಾರಕ್ಕೆ ಅಣ್ಣ-ತಮ್ಮನ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತಂತೆ. ಇಂದು ಕೂಡ ಜಮೀನಿನ ವಿಷಯವಾಗಿ ಅಣ್ಣ-ತಮ್ಮನ ನಡುವೆ ಕಲಹ ತಾರಕಕ್ಕೇರಿತ್ತು.
ಇದರಿಂದ ರೊಚ್ಚಿಗೆದ್ದ ಗಂಗಾಧರ್ ಮಚ್ಚಿನಿಂದ ಅಣ್ಣ ಮಾದೇಗೌಡನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಕೊಲೆ ಮಾಡಿದ ಗಂಗಾಧರ್ನನ್ನು ಬಂಧಿಸಿದ್ದಾರೆ. ಈ ಸಂಬಂಧ ಹೆಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.