ಕರ್ನಾಟಕ

karnataka

ETV Bharat / state

ಕುಡಿತದ ಗೀಳು: ಮೈಸೂರಿನಲ್ಲಿ ತಮ್ಮನನ್ನೇ ಕೊಂದ ಅಣ್ಣ - ಮೈಸೂರಿನ ಮಹದೇವಪುರದಲ್ಲಿ ಕೊಲೆ

ಕುಡಿದು ತೊಂದರೆ ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ, ಅಣ್ಣನು ಸ್ವಂತ ತಮ್ಮನನ್ನೇ ಕೊಲೆ ಮಾಡಿದ್ದಾನೆ. ಇಬ್ಬರು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದು, ರೌಡಿ ಶೀಟರ್​​ರೊಬ್ಬನ ಮಕ್ಕಳಾಗಿದ್ದಾರೆ.

a murder in mysuru
ಮೈಸೂರಿನಲ್ಲಿ ಅಣ್ಣನಿಂದಲೇ ತಮ್ಮನ ಕೊಲೆ

By

Published : May 21, 2020, 8:56 PM IST

ಮೈಸೂರು:ಪ್ರತಿದಿನ ಕುಡಿದು ತೊಂದರೆ ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಸ್ವಂತ ತಮ್ಮನನ್ನೇ ಅಣ್ಣನು ಕೊಲೆ ಮಾಡಿರುವ ಘಟನೆ ನಗರದ ಮಹದೇವಪುರದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುತ್ತಿದ್ದ ವಿಷ್ಣು (28) ಕೊಲೆಯಾದವ. ಈತ ಮತ್ತು ಇವನ ಅಣ್ಣ ನಾರಾಯಣ ಇಬ್ಬರು ರೌಡಿ ಶೀಟರ್ ದಯಾನಂದ ಎಂಬುವವನ ಮಕ್ಕಳಾಗಿದ್ದು, ಇಬ್ಬರು ಜೊತೆಯಾಗಿ ವಾಸ ಮಾಡುತ್ತಿದ್ದರು.

ವಿಷ್ಣು ಪ್ರತಿದಿನ ಕುಡಿದು ಬಂದು ತೊಂದರೆ ಕೊಡುತ್ತಿದ್ದ. ಈ ಹಿನ್ನೆಲೆಯಲ್ಲಿ ಅಣ್ಣ-ತಮ್ಮಂದಿರ ನಡುವೆ ಗಲಾಟೆಗಳು ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವಿಷ್ಣುವನ್ನು ಅಣ್ಣ ನಾರಾಯಣ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಮೈಸೂರಿನಲ್ಲಿ ನಡೆದ ಕೊಲೆ

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರ ವಿಚಾರಣೆ ವೇಳೆ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ.

ನನ್ನ ತಮ್ಮನ ಕಿರುಕುಳ ತಾಳಲಾರದೆ ನಾನೇ ಚಾಕುವಿನಿಂದ ಇರಿದು ಕೊಂದಿದ್ದೇನೆ ಎಂದು ಬಂಧಿತ ಆರೋಪಿ ಒಪ್ಪಿಕೊಂಡಿದ್ದಾನೆ.

ABOUT THE AUTHOR

...view details