ಕರ್ನಾಟಕ

karnataka

ETV Bharat / state

ಕೊಲೆಯಾದ ಮಗನನ್ನು ಟ್ಯಾಟೂವಿನಿಂದ ಪತ್ತೆ ಹಚ್ಚಿದ ತಾಯಿ: ಎಸ್‌ಪಿ ಚೇತನ್ - mysore latest news

ಜೂನ್ 18ರಂದು ಸೈಯದ್ ಜಲೀಲ್ ಹಾಗೂ ಉದಯ್​​ಗೆ ಎಂಬುವವರ ನಡುವೆ ಸಣ್ಣ ವಿಷಯಕ್ಕೆ ಜಗಳವಾಗಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.

murder-case-in-mysore
ಕೊಲೆಯಾದ ಮಗನನ್ನು ಟ್ಯಾಟೂವಿನಿಂದ ಪತ್ತೆ ಹಚ್ಚಿದ ತಾಯಿ: ಎಸ್‌ಪಿ ಚೇತನ್

By

Published : Jun 29, 2021, 11:59 PM IST

ಮೈಸೂರು: ಸ್ನೇಹಿತನಿಂದ ಕೊಲೆಯಾಗಿ ಕೆರೆಗೆ ಎಸೆಯಲ್ಪಟ್ಟಿದ್ದ, ಮಗನ ಮೃತ ದೇಹವನ್ನು ಟ್ಯಾಟೂ ಮೂಲಕ ಮೃತನ ತಾಯಿ ಪತ್ತೆ ಹಚ್ಚಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಅರಸಿನಕೆರೆಯಲ್ಲಿ ಜೂ‌ನ್​​ 25ರಂದು ಅಪರಿಚಿತ ಶವ ಪತ್ತೆಯಾದಾಗ, ಕೊಲೆ ಶಂಕೆ ವ್ಯಕ್ತಪಡಿಸಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು‌. ಅದರಂತೆ ಪಿರಿಯಾಪಟ್ಟಣ ಪೊಲೀಸರು ತನಿಖೆಗಿಳಿದಾಗ ಅದು ಕೊಲೆ ಎಂದು ಗೊತ್ತಾಗಿದೆ.

ಎಸ್‌ಪಿ ಚೇತನ್

ನಡೆದಿದ್ದೇನು..?

ಜೂನ್ 18ರಂದು ಸೈಯದ್ ಜಲೀಲ್ ಹಾಗೂ ಉದಯ್​​ಗೆ ಎಂಬುವವರ ನಡುವೆ ಸಣ್ಣ ವಿಷಯಕ್ಕೆ ಜಗಳವಾಗಿದೆ. ನಂತರ ಜೂನ್ 19ರಂದು ಉದಯ್​ನನ್ನು, ಜಲೀಲ್ ಕೊಲೆ ಮಾಡಿ ಅಂಗಡಿ ಹಿಂದೆ ಮೃತದೇಹ ಇಟ್ಟುಕೊಂಡಿರುತ್ತಾನೆ. ನಂತರ ಜೂನ್​ 24ರಂದು ಜಲೀಲ್, ತನ್ಮ ಸ್ನೇಹಿತರಾದ ಫಯಾಜ್ ಅಹ್ಮದ್ ಹಾಗೂ ಪುಟ್ಟರಂಗ ಜೊತೆಗೂಡಿ ಅರಸಿನ ಕೆರೆಗೆ ಮೃತದೇಹವನ್ನು ಬಿಸಾಡಿ ಹೋಗಿರುತ್ತಾರೆ.

ಅರಸಿನ ಕೆರೆ ಬಳಿ ಸಿಕ್ಕ ಮೃತದೇಹದ ಬಗ್ಗೆ ತಾಲೂಕಿನ ಸುತ್ತಮುತ್ತ ಮಾಹಿತಿ ರವಾನಿಸಿದಾಗ, ಕೆರೆ ಬಳಿ ಬಂದು ಮೃತನ ಮೇಲಿದ್ದ ಟ್ಯಾಟೂ ನೋಡಿ ಈತನ ನನ್ನ ಮಗನೆಂದು ತಾಯಿ ಹೇಳಿದಾಗ, ಪಿರಿಯಾಪಟ್ಟಣ ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡು ಕೊಲೆ ಮಾಡಿದ ಜಲೀಲ್, ಶವ ಸಾಗಿಸಲು ನೆರವಾದ ಫಯಾಜ್ ಅಹ್ಮದ್ ಹಾಗೂ ಪುಟ್ಟರಂಗನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:65 ಇನ್ಸ್​ಪೆಕ್ಟರ್​ಗಳನ್ನು ಎತ್ತಂಗಡಿ ಮಾಡಿದ ರಾಜ್ಯ ಪೊಲೀಸ್ ಇಲಾಖೆ

ABOUT THE AUTHOR

...view details