ಕರ್ನಾಟಕ

karnataka

ETV Bharat / state

ಅಕ್ರಮ ಸಂಬಂಧವೇ ಕೊಲೆಗೆ ಕಾರಣ: 7 ಆರೋಪಿಗಳ ಬಂಧನ - mysore crime news

ಮೈಸೂರಿನ ಕೇತುಪುರ ಗ್ರಾಮದ ಸಿದ್ದರಾಜು ಎಂಬುವವರ ಕೊಲೆಗೈದಿದ್ದ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.

Murder case in  mysore
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ

By

Published : Sep 18, 2020, 8:28 PM IST

ಮೈಸೂರು: ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬನ್ನೂರು ಠಾಣೆ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕೇತುಪುರ ಗ್ರಾಮದ ಸಂಜಯ್ (24), ಸುಭಾಷ್ (23), ಚಂದನ್​ (22), ಪುನೀತ್​ (22), ವಿನಯ್ (22), ರವಿ (24) ಹಾಗೂ ಚಂದ್ರು (25) ಬಂಧಿತ ಆರೋಪಿಗಳಾಗಿದ್ದಾರೆ.

ಬನ್ನೂರು ಠಾಣಾ ವ್ಯಾಪ್ತಿಯ ಕೇತುಪುರ ಗ್ರಾಮದಲ್ಲಿ ಸೆಪ್ಟಂಬರ್​ 12ರಂದು ಸಿದ್ದರಾಜು ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೃತ್ಯಕ್ಕೆ ಉಪಯೋಗಿಸಿದ ಮಾರಕಾಸ್ತ್ರಗಳು, ಬೈಕ್​ಗಳು ಹಾಗೂ ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲೆಯಾದ ಸಿದ್ದರಾಜು ಪತ್ನಿ ಜೊತೆ ಸಂಜಯ್ ಅಕ್ರಮ ಸಂಬಂಧ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಜು ಕುಟುಂಬದವರು ಸಂಜಯ್ ಹಾಗೂ ಸ್ನೇಹಿತರೊಂದಿಗೆ ಆಗಾಗ ಗಲಾಟೆಗಳಾಗುತ್ತಿದ್ದವು. ಸೆ.10ರಂದು ಮನೆಯ ಮುಂದೆ ವ್ಹೀಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಸಿದ್ದರಾಜುವಿನಿಂದ ತೊಂದರೆ ತಪ್ಪಿದ್ದಲ್ಲ ಎಂದು ಸಂಚು ರೂಪಿಸಿ, ಕೊಲೆಗೈದಿದ್ದಾಗಿ ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ.

ABOUT THE AUTHOR

...view details