ಕರ್ನಾಟಕ

karnataka

ETV Bharat / state

ಮೈಸೂರು: ಗಾಂಜಾ ಮತ್ತಿನಲ್ಲಿದ್ದ ಗುಂಪಿನಿಂದ ಯುವಕನಿಗೆ ಚಾಕು ಇರಿತ - treatment in k r hospital

ಗಾಂಜಾ ಮತ್ತಿನಲ್ಲಿದ್ದ ಮೂರು ಜನರ ಗುಂಪೊಂದು ಯುವಕನೋರ್ವ ಹೊಟ್ಟೆಗೆ ಚಾಕುವಿನಿಂದ ಇರಿದು, ಹಲ್ಲೆ ನಡೆಸಿದೆ. ಮೈಸೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.

murder-attempt-in-mysore
murder-attempt-in-mysore

By

Published : Aug 31, 2020, 2:41 PM IST

ಮೈಸೂರು:ಗಾಂಜಾ ಮತ್ತಿನಲ್ಲಿದ್ದ ದುಷ್ಕರ್ಮಿಗಳ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಮಾರಗೌಡನಹಳ್ಳಿ ಗೇಟ್ ಬಳಿ ಘಟನೆ.

ಮಾರಗೌಡನಹಳ್ಳಿ ಪ್ರಸನ್ನ (30) ಹಲ್ಲೆಗೊಳಗಾಗಿರುವ ಯುವಕ. ಮೂರು ಜನರ ಗುಂಪು ಪ್ರಸನ್ನನ ಹೊಟ್ಟೆಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದೆ.

ಹಲ್ಲೆಗೊಳಗಾದ ಯುವಕ ಬೈಕ್‌ನಲ್ಲಿ ಬರುವಾಗ ಅಡ್ಡ ಹಾಕಿದ ದುಷ್ಕರ್ಮಿಗಳು ಹಣ ಕೊಡುವಂತೆ ಕೇಳಿದ್ದಾರೆ. ತನ್ನ ಬಳಿ ಹಣ ಇಲ್ಲ ಎಂದಿದ್ದಕ್ಕೆ ಆಕ್ರೋಶಗೊಂಡ ಮೂವರು ಕಿರಾತಕರು ಚಾಕುವಿನಿಂದ ಇರಿದಿದ್ದಾರೆ.

ಗಾಯಾಳು ಪ್ರಸನ್ನಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details