ಕರ್ನಾಟಕ

karnataka

ETV Bharat / state

ಮೈಸೂರು: ವಿಷ ಕುಡಿದು ಪೊಲೀಸ್ ಠಾಣೆಗೆ ಬಂದ ಕೊಲೆ ಆರೋಪಿ! - Murder accused consume poison

ವಿಷ ಕುಡಿದು ಪೊಲೀಸ್ ಠಾಣೆಗೆ ಬಂದ ಕೊಲೆ ಆರೋಪಿಗೆ ಪೊಲೀಸರು ಚಿಕಿತ್ಸೆ ಕೊಡಿಸಿ ನಂತರ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Murder accused came to police station by consuming poison in Mysore
ಮೈಸೂರು: ವಿಷ ಕುಡಿದು ಪೊಲೀಸ್ ಠಾಣೆಗೆ ಬಂದ ಕೊಲೆ ಆರೋಪಿ

By

Published : Jun 27, 2022, 2:22 PM IST

ಮೈಸೂರು: ಕೊಲೆ ಆರೋಪಿಯೊಬ್ಬ ನಾನು ವಿಷ ಕುಡಿದಿದ್ದೇನೆ, ನನ್ನನ್ನು ಅರೆಸ್ಟ್ ಮಾಡಿ ಎಂದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಬಂದ ಘಟನೆ ಶುಕ್ರವಾರ ನಡೆದಿದೆ. ಆತನಿಗೆ ಚಿಕಿತ್ಸೆ ಕೊಡಿಸಿ ಭಾನುವಾರ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹುಲ್ಲಹಳ್ಳಿ ಗ್ರಾಮದ ಬಾರ್ ಒಂದರಲ್ಲಿ ಮಹಾದೇವಸ್ವಾಮಿ ಹಾಗೂ ಜವರನಾಯಕ ನಡುವೆ ಕುಡಿದ ಅಮಲಿನಲ್ಲಿ ಜೂನ್ 14ರಂದು ಗಲಾಟೆ ಆಗಿತ್ತು. ಆ ಸಂದರ್ಭದಲ್ಲಿ ಜವರನಾಯಕನಿಗೆ ಮಾರಣಾಂತಿಕ ಹಲ್ಲೆ ಆಗಿ ಮೃತ ಪಟ್ಟಿದ್ದ. ಹಲ್ಲೆ ಮಾಡಿದ್ದ ಮಹಾದೇವಸ್ವಾಮಿ ನಾಪತ್ತೆ ಆಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

ಶುಕ್ರವಾರ ಮಹಾದೇವಸ್ವಾಮಿ ಕ್ರಿಮಿನಾಶಕ ಸೇವನೆ ಮಾಡಿ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ನೀವು ಹುಡುಕುತ್ತಿರುವ ಮಹಾದೇವಸ್ವಾಮಿ ನಾನೇ, ನಾನೇ, ನನ್ನನ್ನು ಬಂಧಿಸಿ ಎಂದಿದ್ದಾನೆ. ಬಂಧಿಸಲು ಮುಂದಾದಾಗ ಪೊಲೀಸರ ಜೊತೆ ನಾನು ಈಗಾಗಲೇ ಕ್ರಿಮಿನಾಶಕ ಕುಡಿದು ಬಂದಿದ್ದೇನೆ. ನೀವು ಏನೂ ಮಾಡಲು ಆಗುವುದಿಲ್ಲ. ನಾನೇ ಸಾಯುತ್ತೇನೆ ಎಂದು ಹೇಳಿದ್ದಾನೆ.

ತಕ್ಷಣ ಪೊಲೀಸರು ಮೇಲಾಧಿಕಾರಿಗಳ ಗಮನಕ್ಕೆ ತಂದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅನಂತರ ಒಂದೆರಡು ದಿನಗಳಲ್ಲಿ ಚೇತರಿಸಿಕೊಂಡ ಮಹಾದೇವಸ್ವಾಮಿಯನ್ನು ಭಾನುವಾರ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ತಡೆದು ನಿಲ್ಲಿಸದಿರಿ.. ಪ್ರವೀಣ್ ಸೂದ್ ಸೂಚನೆ

ABOUT THE AUTHOR

...view details