ಕರ್ನಾಟಕ

karnataka

ETV Bharat / state

ಆಸ್ತಿ ವಿಚಾರಕ್ಕೆ ವೃದ್ಧನನ್ನು ಕೊಂದು ನಾಲೆಗೆ ಎಸೆದ ಪ್ರಕರಣ: ಇಬ್ಬರ ಬಂಧನ - ನಂಜನಗೂಡು ತಾಲೂಕು

ವೃದ್ಧನನ್ನು ಕೊಲೆ ಮಾಡಿ ನಾಲೆಗೆಸೆದ ಆರೋಪಿಗಳನ್ನು ಮೈಸೂರಿನ ಹುಲ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Murder accused arrested in Mysuru
ವೃದ್ಧನ ಕೊಲೆ

By

Published : Jun 3, 2021, 12:29 PM IST

ಮೈಸೂರು: ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ವೃದ್ಧನನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದ ಆರೋಪಿಗಳನ್ನು ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡು ಗೌಡರಹುಂಡಿ ಗ್ರಾಮದ ಶಿವರಾಜಪ್ಪ (60) ಕೊಲೆಯಾದ ವ್ಯಕ್ತಿ. ನಾಲ್ಕೈದು ದಿನಗಳ ಹಿಂದೆ ಮೃತ ವ್ಯಕ್ತಿಯ ಕುಟುಂಬಸ್ಥರು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಶಿವರಾಜಪ್ಪ ಮೃತದೇಹ ಹುಲ್ಲಹಳ್ಳಿ ಬಿದರಗೂಡು ಸಮೀಪದ ನಾಲೆಯಲ್ಲಿ ಪತ್ತೆಯಾಗಿತ್ತು.

ಎಫ್​ಐಆರ್ ಪ್ರತಿ

ಸದ್ಯ, ಕೊಲೆ ಆರೋಪಿಗಳಾದ ಶರತ್ ಕುಮಾರ್ ಮತ್ತು ಸುದರ್ಶನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿ ವಿಚಾರವಾಗಿ ಮೃತ ವೃದ್ಧನ ಹೆಂಡತಿಯ ಸಂಬಂಧಿಕರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಯುವಕ ಸಾವು

ABOUT THE AUTHOR

...view details