ಕರ್ನಾಟಕ

karnataka

ETV Bharat / state

ಜು‌‌‌‌ಲೈ 24ರಿಂದ ನಂಜುಂಡೇಶ್ವರ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ಮುಡಿ ಸೇವೆ ಸ್ಥಗಿತ - Mysore

ನಂಜನಗೂಡು ಕಪಿಲಾ ನದಿಯ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ನಂಜುಂಡೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ ಮುಡಿ ಹರಕೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Nanjangud temple
ನಂಜುಂಡೇಶ್ವರನ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ಮುಡಿ ಸೇವೆ ಸ್ಥಗಿತ

By

Published : Jul 23, 2021, 7:16 PM IST

ಮೈಸೂರು:ಐತಿಹಾಸಿಕ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ (ಜು‌‌‌‌.24ರಿಂದ) ತಾತ್ಕಾಲಿಕವಾಗಿ ಮುಡಿ ಸೇವೆ ಸ್ಥಗಿತಗೊಳಿಸಲಾಗಿದೆ.

ನಂಜನಗೂಡು ಕಪಿಲಾ ನದಿಯ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ಭಕ್ತಾದಿಗಳು ಹಾಗು ಸ್ಥಳೀಯರಿಗೆ ಸ್ನಾನಘಟ್ಟದಲ್ಲಿ ಸ್ನಾನ ಮಾಡಲು ಇಂದಿನಿಂದ ನಿರ್ಬಂಧ ಹೇರಲಾಗಿದೆ. ನಾಳೆಯಿಂದ ಮುಡಿ ಹರಕೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ನಂಜುಂಡೇಶ್ವರನ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ಮುಡಿ ಸೇವೆ ಸ್ಥಗಿತ

ನೀರಿನ ಪ್ರಮಾಣ ಕಡಿಮೆಯಾಗುವವರೆಗೆ ಸ್ನಾನಘಟ್ಟದ ಬಳಿ ಯಾರೂ ತೆರಳದಂತೆ ಎಚ್ಚರಿಕೆ ವಹಿಸಲಾಗಿದೆ. ಜುಲೈ ಅಂತ್ಯದಲ್ಲಿ ಸ್ನಾನ ಘಟ್ಟ ಮುಳುಗಡೆಯಾಗಿರುವುದು ಸ್ಥಳೀಯರಿಗೆ ಅಚ್ಚರಿ ಸಂಗತಿಯಾಗಿದೆ.

ಕಬಿನಿ ಜಲಾಶಯದ ಒಳಹರಿವು ಹೆಚ್ಚಳ:

ಕೇರಳದ ವಯನಾಡು ಪ್ರದೇಶದಲ್ಲಿ ಹಾಗು ಕಬಿನಿ ಜಲಾಶಯದ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಇದರಿಂದ ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಬಿನಿ ಜಲಾಶಯದಿಂದ ಕಪಿಲ ನದಿಗೆ ನೀರು ಬಿಡಲಾಗಿದ್ದು, ದಕ್ಷಿಣ ಕಾಶಿ ನಂಜನಗೂಡಿನ ಬಳಿ ಶ್ರೀಕಂಠೆಶ್ವರ ದೇವಾಲಯದ ಸ್ನಾನಘಟ್ಟದ ಮೆಟ್ಟಿಲುಗಳು‌ ಹಾಗೂ 16 ಕಾಲು ಮಂಟಪ ಮುಳುಗಡೆಯಾಗುತ್ತಿದೆ.

ನಂಜನಗೂಡು ಪಟ್ಟಣದ ನದಿ ಭಾಗದಲ್ಲಿರುವ ತೋಪಿನ ಬೀದಿ, ವಕ್ಕಲಗೆರಿ , ಹಳ್ಳದ ಕೆರಿ, ಗೌರಿಗಟ್ಟದ ಬೀದಿಯ ಬಡಾವಣೆಗೆ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದ್ದು, ತಾಲೂಕು ಆಡಳಿತ ಹೈಅಲರ್ಟ್ ಆಗಿದೆ. ಕಬಿನಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದ್ದು, ತೀರ ಪ್ರದೇಶದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಜುಲೈ 27ರವರೆಗೆ ವರುಣನ ಅಬ್ಬರ : ಹಲವು ಜಿಲ್ಲೆಗಳಲ್ಲಿ ಹೈಅಲರ್ಟ್‌

ABOUT THE AUTHOR

...view details