ಮೈಸೂರು: ಭೂ ಸ್ವಾಧೀನಕ್ಕೆ ಹೆಚ್ಚುವರಿ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆ ಮುಡಾ ಆಯುಕ್ತರ ಕಾರು ಸೀಜ್ ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಪರಿಹಾರ ಕೊಡುವಲ್ಲಿ ವಿಳಂಬ: ಮುಡಾ ಆಯುಕ್ತರ ಕಾರು ಸೀಜ್ಗೆ ಕೋರ್ಟ್ ಆದೇಶ - Muda Commissioner
ಭೂ ಸ್ವಾಧೀನಕ್ಕೆ ಹೆಚ್ಚುವರಿ ಪರಿಹಾರ ಕೊಡುವಲ್ಲಿ ವಿಳಂಬ ಮಾಡಿರುವ ಹಿನ್ನೆಲೆ ಮುಡಾ ಆಯುಕ್ತರ ಕಾರು ಸೀಜ್ ಮಾಡುವಂತೆ ಮೈಸೂರಿನ ನಾಲ್ಕನೇ ಎಸಿಜೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಮೈಸೂರಲ್ಲಿ ಮುಡಾ ಆಯುಕ್ತರ ಕಾರು ಸೀಜ್!
ದಶಕಗಳ ಹಿಂದೆ ಲೇಔಟ್ ನಿರ್ಮಾಣಕ್ಕಾಗಿ ರೈತರ ಜಮೀನನ್ನು ಮುಡಾ ಭೂ ಸ್ವಾಧೀನಪಡಿಸಿಕೊಂಡಿಸಿತ್ತು. ಪ್ರಕರಣವೊಂದಕ್ಕೆ ಬಾಕಿ ಪಾವತಿ ಮಾಡದ ಹಿನ್ನೆಲೆ ಮುಡಾಗೆ ಸಂಬಂಧಪಟ್ಟ 5 ವಾಹನಗಳನ್ನು ಜಪ್ತಿ ಮಾಡುವಂತೆ ನಾಲ್ಕನೇ ಎಸಿಜೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಹಿನ್ನೆಲೆ ಆಯುಕ್ತರ ಕಾರು ಸೇರಿದಂತೆ ಪ್ರಾಧಿಕಾರದ ಎರಡು ಕಾರುಗಳಿಗೆ ನ್ಯಾಯಾಲಯದ ಅಮೀನರು ನೋಟಿಸ್ ಪ್ರತಿ ಅಂಟಿಸಿದ್ದಾರೆ. ಅಲ್ಲದೆ ಆದೇಶದ ಪ್ರತಿ ಹಿಡಿದು ಮುಡಾ ಆವರಣದಲ್ಲೇ ಅರ್ಜಿದಾರರ ಪರ ವಕೀಲರು ನಿಂತಿದ್ದಾರೆ.