ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯರ ಮೇಲಿನ ಹಠದಿಂದ ಲೋಕಸಭಾ ಚುನಾವಣೆಗೆ ನಿಂತೆ : ಶ್ರೀನಿವಾಸ್ ಪ್ರಸಾದ್ - 2019ರ ಲೋಕಸಭಾ ಚುನಾವಣೆ

ಸಿದ್ದರಾಮಯ್ಯ ಅಧಿಕಾರ ಇದ್ದಾಗ ಏನೇನು ಮಾಡಿದ್ರಿ ನೆನಪು ಮಾಡಿಕೊಳ್ಳಿ. ಅದಕ್ಕೆ 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸೋತಿದ್ದೀರಿ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತದ್ದನ್ನು ಮತ್ತೆ ನೆನಪಿಸಿದರು..

MP V Srinivas Prasad talk about election news
ಶ್ರೀನಿವಾಸ್ ಪ್ರಸಾದ್

By

Published : Jan 9, 2021, 7:29 PM IST

ಮೈಸೂರು :ನಂಜನಗೂಡು ಉಪಚುನಾವಣೆ ಸೋಲಿನ ಬಳಿಕ ಸಿದ್ದರಾಮಯ್ಯರ ಮೇಲಿನ ಹಠದಿಂದ ಹಾಗೂ ಛಲಕ್ಕಾಗಿ 2019ರ ಲೋಕಸಭಾ ಚುನಾವಣೆಗೆ ನಿಂತೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

ನಂಜನಗೂಡಿನಲ್ಲಿ ಬಿಜೆಪಿ ಬೆಂಬಲಿತ ವಿಜೇತ ಗ್ರಾಪಂ ಸದಸ್ಯರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಚಾಮರಾಜನಗರದಲ್ಲಿ ಬಿಜೆಪಿ ಬಾವುಟ ಹಾರಿಸಿದೆ. ನನ್ನ ಮನಸ್ಸಿಗೆ ನೆಮ್ಮದಿ ಆಯ್ತು ಎಂದು ಫ್ಲ್ಯಾಶ್ ಬ್ಯಾಕ್ ನೆನಪು ಮಾಡಿಕೊಂಡರು.

ಓದಿ: ಕಾರ್ಯಕ್ರಮಕ್ಕೆ ಕರೆದು ಅವಮಾನಿಸುವುದು ಸರಿಯೇ: ಬಸವರಾಜ ರಾಯರೆಡ್ಡಿ ಅಸಮಾಧಾನ

ನನಗೆ ಚುನಾವಣೆ ಬೇಕಾಗಿರಲಿಲ್ಲ, ಆರೋಗ್ಯ ದೃಷ್ಟಿಯಿಂದ ವಿಶ್ರಾಂತಿ, ನೆಮ್ಮದಿ ಬೇಕಾಗಿತ್ತು. ಆದರೆ, ಸಿದ್ದರಾಮಯ್ಯಗೆ ನನ್ನ ಶಕ್ತಿ ತೋರಿಸಬೇಕು ಎಂದು ಚುನಾವಣೆ ನಿಂತು ತೋರಿಸಿದೆ. ನಾನು 50 ವರ್ಷಗಳಿಂದ ಚುನಾವಣೆಯಲ್ಲಿ ನಿಲ್ಲುತ್ತಿದ್ದೇನೆ. 14 ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 9 ಚುನಾವಣೆ ಗೆದ್ದಿದ್ದೇನೆ ಎಂದರು.

ಶ್ರೀನಿವಾಸ್ ಪ್ರಸಾದ್

ನಂಜನಗೂಡು ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ-ಮಹದೇವಪ್ಪ ಹೇಗೆ ಮಾಡಿದ್ದರು?. ಉಪಚುನಾವಣೆಗೆ ಕಾಂಗ್ರೆಸ್​​ನಲ್ಲಿ ನನ್ನ ವಿರುದ್ಧ ನಿಲ್ಲುವ ಅಭ್ಯರ್ಥಿ ಇರಲಿಲ್ಲ. ಅದಕ್ಕೆ ಕಾಂಗ್ರೆಸ್ಸಿನವರು ಜೆಡಿಎಸ್‌ನಿಂದ ಕೇಶವಮೂರ್ತಿಯನ್ನ ಕರೆದುಕೊಂಡು ನಿಲ್ಲಿಸಿದ್ದರು.

ನನ್ನ ವಿರುದ್ಧ ನಿಮ್ಮ ಪಕ್ಷದಲ್ಲೇ ಕ್ಯಾಂಡಿಡೇಟ್ ಇರಲಿಲ್ಲವೇ?. ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಗೆ‌ ಕೆಲಸ ಮಾಡಿದ ಅಂತಾ ಗೊತ್ತು, ಸಿದ್ದರಾಮಯ್ಯ ಅವರ ಕಥೆ ಈಗ ಏನಾಗಿದೆ?‌ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅಧಿಕಾರ ಇದ್ದಾಗ ಏನೇನು ಮಾಡಿದ್ರಿ ನೆನಪು ಮಾಡಿಕೊಳ್ಳಿ. ಅದಕ್ಕೆ 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸೋತಿದ್ದೀರಿ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತದ್ದನ್ನು ಮತ್ತೆ ನೆನಪಿಸಿದರು.

ABOUT THE AUTHOR

...view details