ಮೈಸೂರು: ಕೆಆರ್‌ಎಸ್ ವಿವಾದ ಹಿನ್ನೆಲೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇಬ್ಬರು ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.
ಮೈಸೂರು ಜಿಲ್ಲಾ ಪೊಲೀಸ್ ಡಿಎಆರ್ ಘಟಕದ ಆಡಳಿತ ಕಚೇರಿಯ ಕಟ್ಟಡ ಹಾಗೂ ಶಸ್ತ್ರಾಗಾರ ಕಟ್ಟಡ ಮತ್ತು ಮೈಸೂರು ಪೊಲೀಸ್ ಅಧೀಕ್ಷಕರ ವಸತಿಗೃಹ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮೊದಲು ಸುಮಲತಾ ಅಂಬರೀಶ್ ಹಾಗೂ ಹೆಚ್.ವಿಶ್ವನಾಥ್ ಅವರು ಕೆಆರ್‌ಎಸ್ ವಿವಾದದ ಬಗ್ಗೆ ಚರ್ಚಿಸಿದ್ದಾರೆ.