ಕರ್ನಾಟಕ

karnataka

ETV Bharat / state

ಸಿದ್ದರಾಮೋತ್ಸವ ಆಚರಣೆ ಅಗತ್ಯವಿರಲಿಲ್ಲ: ಸಂಸದ ಶ್ರೀನಿವಾಸ್ ಪ್ರಸಾದ್ - ಸಿದ್ದರಾಮೋತ್ಸವ ಆಚರಣೆ ಬಗ್ಗೆ ಸಂಸದ ಶ್ರೀನಿವಾಸ್​ ಪ್ರಸಾದ್​ ಪ್ರತಿಕ್ರಿಯೆ

ಸಿದ್ದರಾಮಯ್ಯ ಒಬ್ಬ ಮಹಾನ್ ಸುಳ್ಳುಗಾರ, ಆತನ ಸುಳ್ಳನ್ನು ಕೇಳಿ ನನಗೂ ಆಶ್ಚರ್ಯವಾಯಿತು ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.

ಸಂಸದ ಶ್ರೀನಿವಾಸ್ ಪ್ರಸಾದ್
ಸಂಸದ ಶ್ರೀನಿವಾಸ್ ಪ್ರಸಾದ್

By

Published : Jul 13, 2022, 6:58 PM IST

ಮೈಸೂರು:ಸಿದ್ದರಾಮೋತ್ಸವದಿಂದ ಕಾಂಗ್ರೆಸ್​ನಲ್ಲಿ ಗೊಂದಲಗಳು ಆರಂಭವಾಗಿವೆ. ಹಾಗಾಗಿ, ಸಿದ್ದರಾಮೋತ್ಸವದ ಆಚರಣೆಯ ಅಗತ್ಯ ಇರಲಿಲ್ಲ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ಮಧ್ಯೆ ಮೇಕೆದಾಟು ಯೋಜನೆಯಿಂದ ಆರಂಭವಾದ ಜಗಳ ಹಾಗೂ ಗೊಂದಲಗಳು ಸಿದ್ದರಾಮೋತ್ಸವದಲ್ಲೂ ಮುಂದುವರೆದಿದ್ದು, ಸಿದ್ದರಾಮೋತ್ಸವದಿಂದಲೇ ಕಾಂಗ್ರೆಸ್​ನಲ್ಲಿ ಗೊಂದಲಗಳು ಆರಂಭವಾಗಿವೆ. ಆದ್ದರಿಂದ, ಸಿದ್ದರಾಮೋತ್ಸವ ಆಚರಣೆಯ ಅಗತ್ಯ ಇರಲಿಲ್ಲ ಎಂದರು.

ಸಿದ್ದರಾಮಯ್ಯ ಒಬ್ಬ ಮಹಾನ್ ಸುಳ್ಳುಗಾರ, ಆತನ ಸುಳ್ಳನ್ನು ಕೇಳಿ ನನಗೂ ಆಶ್ಚರ್ಯವಾಯಿತು. ಸ್ವಂತ ಜಿಲ್ಲೆಯಲ್ಲೇ 36 ಸಾವಿರ ಮತಗಳಿಂದ ಸೋತು ರಾತ್ರೋರಾತ್ರಿ ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಹೋದರು. ಈ ಕಾರಣಕ್ಕಾಗಿ ಸಿದ್ದರಾಮೋತ್ಸವವನ್ನು ಮುಂದೆ ಒಂಟಿ ಕೊಪ್ಪಲು ಪಂಚಾಂಗದಲ್ಲಿ ಸೇರಿಸಲೇಬೇಕು ಎಂದು ಹೇಳಿದ್ದೆ. ಕೇವಲ ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಈ ಸಿದ್ದರಾಮೋತ್ಸವ ಮಾಡುತ್ತಿರುವುದನ್ನು ಬಿಟ್ಟರೆ, ಇನ್ಯಾವ ಕಾರಣವೂ ಇಲ್ಲ ಎಂದು ಹೇಳಿದರು.

ಡಬಲ್​ ಇಂಜಿನ್​ ಹೇಳಿಕೆ ಸರಿಯಾಗಿದೆ;ಡಬಲ್ ಇಂಜಿನ್ ಸರ್ಕಾರ ಹೇಳಿಕೆ ಸರಿಯಿದೆ. ಡಬಲ್ ಇಂಜಿನ್ ಸರ್ಕಾರ ಎಂದರೆ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದೆ ಎಂಬ ಅರ್ಥ. ಇದರಿಂದ ಅಭಿವೃದ್ಧಿ ಆಗುತ್ತದೆ. ಆದ್ದರಿಂದಲೆ, ಡಬಲ್ ಇಂಜಿನ್ ಸರ್ಕಾರ ಎಂಬ ಹೇಳಿಕೆ ಸರಿಯಿದೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಇಬ್ಬರು ಉತ್ತಮರು, ಇಂತಹ ನಾಯಕತ್ವ ಕಾಂಗ್ರೆಸ್​ನಲ್ಲಿ ಇಲ್ಲ. ಆದ್ದರಿಂದಲೇ, ಪ್ರಧಾನಿ ಅವರನ್ನು ಕಾಂಗ್ರೆಸ್​ ಟೀಕಿಸುತ್ತಲೇ ಸರ್ವನಾಶ ಆಗುತ್ತಿದೆ. ಮೋದಿ ಅವರು ಪ್ರಬಲವಾಗಿ ಬೆಳೆಯುತ್ತಿದ್ದಾರೆ.

ಇನ್ನು ರಾಜ್ಯದಲ್ಲಿ ಸರಳವಾಗಿ ಜನರಿಗೆ ಸ್ಪಂದಿಸುವ ಗುಣವಿರುವ ಬೊಮ್ಮಾಯಿ ಅವರು ಪೂರ್ಣಾವಧಿಯ ಅಧಿಕಾರವನ್ನು ಪೂರೈಸುತ್ತಾರೆ. ಅವರಿಗೆ ಮಂಡಿ ನೋವಿನ ಸಮಸ್ಯೆ ಇರಬಹುದು. ಇದನ್ನು ಹೈಕಮಾಂಡ್​ ನೋಡಿಕೊಳ್ಳುತ್ತದೆ. ಯಡಿಯೂರಪ್ಪ ಬದಲಾವಣೆಯಿಂದ ಬಿಜೆಪಿಗೆ ಹೆಚ್ಚು ನಷ್ಟವಾಗಿಲ್ಲ. ಬಿಜೆಪಿಯನ್ನು ಬೆಂಬಲಿಸುವಂತೆ ಮುಂದೆಯೂ ಬೆಂಬಲಿಸುತ್ತಾರೆ. ಮೈಸೂರು ಭಾಗದಲ್ಲಿ ಬಿಜೆಪಿಯ ಸಂಘಟನಾ ಕೊರತೆಯಿದೆ. ಕೆಲವು ಚುನಾವಣೆ ಸೋಲಾಗಿರಬಹುದು. ಆದರೆ, ಸಾರ್ವತ್ರಿಕ ಚುನಾವಣೆ ನಡೆದರೆ ಬಿಜೆಪಿ ಮೇಲುಗೈ ಸಾಧಿಸುತ್ತದೆ ಎಂದು ಸಂಸದ ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡಿದರು.

ಓದಿ:ಪ್ಲಾಸ್ಟಿಕ್ ಚೀಲ ಬಳಸಲು ಅವಕಾಶ ನೀಡಿ: ತಹಶೀಲ್ದಾರ್​ಗೆ ವ್ಯಾಪಾರಿಗಳ ಒತ್ತಾಯ

For All Latest Updates

TAGGED:

ABOUT THE AUTHOR

...view details