ಕರ್ನಾಟಕ

karnataka

ETV Bharat / state

ಸಿ.ಪಿ.ಯೋಗೇಶ್ವರ್​ಗೆ ಮಂತ್ರಿ ಸ್ಥಾನ ಕೊಟ್ಟಿದ್ದು ಸರಿಯಿದೆ: ಸಂಸದ ಶ್ರೀನಿವಾಸ್ ಪ್ರಸಾದ್

ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿರುವ ಬಗ್ಗೆ ಯಾರೂ ಪ್ರಶ್ನಿಸಬಾರದು ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದರು.

ಸಂಸದ ಶ್ರೀನಿವಾಸ್ ಪ್ರಸಾದ್
MP Srinivas Prasad pressmeet

By

Published : Jan 15, 2021, 4:02 PM IST

Updated : Jan 15, 2021, 5:19 PM IST

ಮೈಸೂರು: ಬಿಜೆಪಿ ಸರ್ಕಾರ ಬರಲು ಕಾರಣರಾದವರಲ್ಲಿ ಸಿ.ಪಿ. ಯೋಗೇಶ್ವರ್ ಒಬ್ಬರು. ಆದ್ದರಿಂದ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದು ಸರಿಯಿದೆ. ಇದನ್ನು ಯಾರೂ ಪ್ರಶ್ನಿಸಬಾರದು ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದರು.

ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಹೆಚ್​​​. ವಿಶ್ವನಾಥ್ ಅವರ ರೀತಿಯಲ್ಲಿ ಯೋಗೇಶ್ವರ್ ಸಹ ಕಾರಣರಾಗಿದ್ದು, ಅವರಿಗೆ ಮಂತ್ರಿ ಸ್ಥಾನ ಕೊಟ್ಟಿರುವ ಬಗ್ಗೆ ವಿಶ್ವನಾಥ್ ಅವರಿಗೆ ಅಸಮಾಧಾನ ಇರುವುದು ಸರಿ. ಆದರೆ ಸಚಿವ ಸ್ಥಾನ ಕೊಟ್ಟಿದ್ದು ಏಕೆ ಎಂದು ಪ್ರಶ್ನೆ ಮಾಡಬಾರದು ಎಂದರು. ಈ ಬಗ್ಗೆ ಮುಖ್ಯಮಂತ್ರಿಯನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಯಾರನ್ನು ಮಂತ್ರಿ ಮಾಡಬೇಕು ಯಾರನ್ನ ಮಾಡಬಾರದು ಎಂದು ತೀರ್ಮಾನ ಸಿಎಂ ಬಿಎಸ್​ವೈ ಬಿಟ್ಟಿದ್ದು ಎಂದರು.

ಸಂಸದ ಶ್ರೀನಿವಾಸ್ ಪ್ರಸಾದ್

ಸದ್ಯ ವಿಶ್ವನಾಥ್ ಕೋಪದಲ್ಲಿದ್ದಾರೆ. ನಂತರದಲ್ಲಿ ಅವರನ್ನು ಕರೆಸಿ ಮಾತನಾಡುತ್ತೇನೆ. ವಿಶ್ವನಾಥ್ ಈಗಿನ ಸ್ಥಿತಿಯಲ್ಲಿ ಸಿಡಿ ವಿಚಾರ ಇಟ್ಟುಕೊಂಡು ಬ್ಲಾಕ್​​ಮೇಲ್ ಮಾಡುವುದು ಸರಿಯಲ್ಲ, ಅದು ನಡೆಯುವುದಿಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಾಧಾನಗಳು ಸಹಜ, ಸ್ವಲ್ಪ ದಿನ ಆದ ಬಳಿಕ ಎಲ್ಲವೂ ಸರಿಹೋಗುತ್ತದೆ. ವಿಶ್ವನಾಥ್ ಬಿಜೆಪಿಗೆ ಸೇರುವಾಗ ಯಡಿಯೂರಪ್ಪರ ಜೊತೆ ಯಾವ ರೀತಿ ಮಾತುಕತೆ ಆಗಿತ್ತು ಎಂಬುದನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ. ಇದನ್ನ ವಿಶ್ವನಾಥ್ ನೆನಪಿಸಿಕೊಳ್ಳಲಿ ಎಂದರು.

ಮಂತ್ರಿ ಆಗಿದ್ದ ನಾಗೇಶ್ ವಿರುದ್ಧ ಆರೋಪಗಳು ಕೇಳಿ ಬಂದ ಕಾರಣ ರಾಜೀನಾಮೆ ಪಡೆಯಲಾಗಿದೆ ಎಂದ ಅವರು, ಮುನಿರತ್ನಗೆ ಮುಂದೆ ಅವಕಾಶಗಳು ಸಿಗುತ್ತವೆ ಎಂದರು. ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಯಾವ ಪಕ್ಷದಲ್ಲಿ ಇದ್ದಾರೆ, ಯಾವ ವೇದಿಕೆಯಲ್ಲಿ ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಿಲ್ಲ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಈಗಲೂ ನನಗೆ ಅಸಮಾಧಾನವಿದೆ, ಪಕ್ಷಕ್ಕಾಗಿ ದುಡಿದವರು ಅವಕಾಶ ಸಿಕ್ಕಿಲ್ಲ ಎಂದರು. ಇನ್ನು ಸಿ.ಡಿ. ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ಈ ಬಗ್ಗೆ ನಾನು ಮಾತನಾಡಲ್ಲ ಎಂದರು.

Last Updated : Jan 15, 2021, 5:19 PM IST

ABOUT THE AUTHOR

...view details