ಕರ್ನಾಟಕ

karnataka

ETV Bharat / state

ಮೈಸೂರು ಡಿಸಿ ವರ್ಗಾವಣೆ ವಿಚಾರ: ಸಿಎಂ ವಿರುದ್ಧ ಶ್ರೀನಿವಾಸ್ ಪ್ರಸಾದ್ ಗರಂ - ಸಿಎಂ ವಿರುದ್ಧ ಶ್ರೀನಿವಾಸ್ ಪ್ರಸಾದ್ ಗರಂ

ಅವಳು ದುರಹಂಕಾರಿ, ಜನಪ್ರತಿನಿಧಿಗಳಿಗೆ ಗೌರವ ಕೊಡಲ್ಲ ಎನ್ನುವ ಕಾರಣಕ್ಕೆ ನಾನೇ ಎಕ್ಸಿಕ್ಯೂಟಿವ್ ಪೋಸ್ಟ್​ಗೆ ಹಾಕಿದ್ದು, ಈಗ ಅವಳನ್ನೆ ಮೈಸೂರು ಡಿಸಿಯಾಗಿ ನೇಮಿಸಿದ್ದು ನನಗೆ ಸುತಾರಾಂ ಇಷ್ಟ ಆಗಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿಯನ್ನು ನೇಮಿಸಿದ್ದಕ್ಕೆ ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿ ಕಾರಿದ್ದಾರೆ.

MP Shrinivas Prasad angary on CM about Mysuru DC transfer issue
ಸಿಎಂ ವಿರುದ್ಧ ಶ್ರೀನಿವಾಸ್ ಪ್ರಸಾದ್ ಗರಂ

By

Published : Dec 21, 2020, 5:10 PM IST

ಮೈಸೂರು : ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ದ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್ ಫುಲ್ ಗರಂ ಆಗಿದ್ದಾರೆ.

ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಶರತ್‌ ಅವರನ್ನು ಒಂದೇ ತಿಂಗಳಲ್ಲಿ ಎತ್ತಂಗಡಿ ಮಾಡಿದ್ದು ಸಿಎಂ ಮಾಡಿದ‌ ತಪ್ಪು ನಿರ್ಧಾರವಾಗಿದೆ. ರೋಹಿಣಿ ಸಿಂಧೂರಿಗೆ ಜಾಗ ತೋರಿಸಬೇಕೆಂದಿದ್ದರೆ ಬೇರೆ ಕಡೆ‌ ಅವಕಾಶ ಕೊಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.

ಸಂಸದ ಶ್ರೀನಿವಾಸ್ ಪ್ರಸಾದ್

ಅವಳು ದುರಹಂಕಾರಿ, ಜನಪ್ರತಿನಿಧಿಗಳಿಗೆ ಗೌರವ ಕೊಡಲ್ಲ :

ಅವಳು ದುರಹಂಕಾರಿ, ಜನಪ್ರತಿನಿಧಿಗಳಿಗೆ ಗೌರವ ಕೊಡಲ್ಲ ಎನ್ನುವ ಕಾರಣಕ್ಕೆ ನಾನೇ ಎಕ್ಸಿಕ್ಯೂಟಿವ್ ಪೋಸ್ಟ್​ಗೆ ಹಾಕಿದ್ದು. ಈಗ ಅವಳನ್ನೇ ಮೈಸೂರು ಡಿಸಿಯಾಗಿ ನೇಮಿಸಿದ್ದು ನನಗೆ ಸುತಾರಾಂ ಇಷ್ಟ ಆಗಿಲ್ಲ ಎಂದರು. ಗುಲ್ಬರ್ಗಾದಲ್ಲಿ ಶರತ್‌ಗೆ ಒಳ್ಳೆ ಹೆಸರಿತ್ತು, ಅವರನ್ನು ಇಲ್ಲಿಗೆ ವರ್ಗಾವಣೆ ಮಾಡಿ‌ 29 ದಿನದಲ್ಲಿ ಬೇರೆ ಕಡೆ ಹಾಕಿದ್ದು ಎಷ್ಟು ಸರಿ..?. ಇಂತಹ ವಿಚಾರದಲ್ಲಿ ಸಿಎಂ ವಿವೇಚನೆಯಿಂದ ವರ್ತಿಸಬೇಕು ಎಂದರು.

ಇದನ್ನೂ ಓದಿ : ಬಿದ್ದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ದೇವೇಗೌಡರ ಸ್ವಭಾವ: ಶ್ರೀನಿವಾಸ್ ಪ್ರಸಾದ್ ಲೇವಡಿ

ಚಾಮರಾಜನಗರ ಎಸ್ಪಿಯನ್ನು ವರ್ಗಾವಣೆ ಮಾಡಿದಾಗಲೇ ನಾನು ವಾರ್ನಿಂಗ್ ಮಾಡಿದ್ದೆ. ಡಿಜಿ ಪ್ರವೀಣ್ ಸೂದ್ ಜೊತೆಗೂ ಮಾತನಾಡಿದ್ದೆ. ಎಸ್ಪಿ ಕೋವಿಡ್ ಟೈಂನಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ. ಯಾಕೆ ಒಂದೇ ವರ್ಷದಲ್ಲಿ ವರ್ಗಾವಣೆ ಮಾಡ್ತೀರಾ ಎಂದು ಕೇಳಿದ್ದೆ ಎಂದರು.

ABOUT THE AUTHOR

...view details