ಕರ್ನಾಟಕ

karnataka

ETV Bharat / state

ಕೆಲ ನಾಯಕರು ವಿಷ ಭಾವನೆ ಬಿತ್ತುತ್ತಿದ್ದಾರೆ: ಬಿಜೆಪಿ ವಿರುದ್ಧ ಧ್ರುವನಾರಾಯಣ ವಾಗ್ದಾಳಿ - ಮೈಸೂರು ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ

ಕನಕಪುರದಲ್ಲಿ ಏಸು ಕ್ರಿಸ್ತನ ಪ್ರತಿಮೆಗೆ ಸಂಬಂಧಿಸಿದಂತೆ, ಮೈಸೂರು ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾಜಿ ಸಂಸದ ಆರ್.ಧ್ರುವನಾರಾಯಣ ಮಾತನಾಡಿದರು.

MP R. Dhruvanarayana
ಮಾಜಿ ಸಂಸದ ಆರ್.ಧ್ರುವನಾರಾಯಣ

By

Published : Dec 28, 2019, 3:34 PM IST

ಮೈಸೂರು: ಕನಕಪುರದಲ್ಲಿ ಏಸು ಕ್ರಿಸ್ತನ ಪ್ರತಿಮೆಗೆ ಸಂಬಂಧಿಸಿದಂತೆ ಬಿಜೆಪಿಯ ಕೆಲ ನಾಯಕರು ಜನರ ಮನಸ್ಸಲ್ಲಿ ವಿಷ ಭಾವನೆ ಬಿತ್ತುತ್ತಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಆರೋಪಿಸಿದರು.

ಮಾಜಿ ಸಂಸದ ಆರ್.ಧ್ರುವನಾರಾಯಣ

ಮೈಸೂರು ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಟ್ರಸ್ಟ್ ಜಾಗದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಸಹಾಯ ಮಾಡಿದ್ದಾರೆಯೇ ವಿನ: ಓಲೈಕೆ ರಾಜಕಾರಣ ಮಾಡಲು ಮುಂದಾಗಿಲ್ಲ. ಆದರೆ ಅನಂತಕುಮಾರ್ ಹೆಗಡೆ, ಪ್ರತಾಪ ಸಿಂಹ, ಬಸವರಾಜ ಯತ್ನಾಳ್, ನಳಿನ್ ಕುಮಾರ್ ಕಟೀಲು, ಸಿ.ಟಿ.ರವಿ ಸೇರಿದಂತೆ ಹಲವರು ಧರ್ಮದ ಆಧಾರದ ಮೇಲೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕ್ರೈಸ್ತ ಮಿಷನರಿಗಳಿಂದ ದೇಶದಲ್ಲಿ ಎಷ್ಟೊಂದು ಪ್ರಗತಿಯಾಗಿದೆ. ಬಿಜೆಪಿ ಅನೇಕರು ಕ್ರೈಸ್ತರ ಶಾಲೆಗಳಲ್ಲಿ ಓದಿಲ್ಲ ಹೇಳಿ? ಸಂಸದ ಪ್ರತಾಪ ಸಿಂಹ ಅವರು ಮಂಗಳೂರಿನಲ್ಲಿ ಕ್ರೈಸ್ತ ಕಾಲೇಜಿನಲ್ಲಿಯೇ ಓದಿರುವುದು. ಆದರೆ ಧರ್ಮದ ಆಧಾರ ಮೇಲೆ ವಿಷ ಭಾವನೆಯನ್ನು ಬಿತ್ತುವ ಕೆಲಸ ಮಾಡಬಾರದು ಎಂದರು.

ಕ್ರೈಸ್ತ ಮಿಷನರಿಗಳ ಬಗ್ಗೆ ಮಾತನಾಡುವ ಆರ್​ಎಸ್ಎಸ್ ಅವರು ದೇಶದ ಜಾತಿಯ ವ್ಯವಸ್ಥೆ ಬಗ್ಗೆ ಯಾಕೆ ಮಾತನಾಡಲ್ಲ. ದೇಶದಲ್ಲಿರುವ ಜಾತಿ ಪದ್ಧತಿ ತೊಲಗಿಸಿ. ಜಾತಿಗೆ ಬೆಲೆ ಕೊಡ್ತಾರೆ, ಗುಣಕ್ಕೆ ಬೆಲೆ ಕೊಡಲ್ಲ ಎಂದು ಹರಿಹಾಯ್ದರು.

ABOUT THE AUTHOR

...view details