ಕರ್ನಾಟಕ

karnataka

ETV Bharat / state

ಎರಡನೇ ಬಾರಿ ಲಾಕ್​​​ಡೌನ್​​ ಮಾಡಲು ಯಾರಿಗೂ ಇಷ್ಟವಿಲ್ಲ: ಸಂಸದ ಪ್ರತಾಪ್ ಸಿಂಹ - ಕೊರೊನಾ ಲಾಕ್​ಡೌನ್​

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಜಾಗೃತಿಯಿಂದ ಇರುವಂತೆ ಜನತೆಗೆ ಮನವಿ ಮಾಡಿದ್ದಾರೆ. ನಾವು ಸಾಧ್ಯವಾದಷ್ಟು ಜಾಗೃತಿ ವಹಿಸಬೇಕು. ಅದ್ಧೂರಿ ಮದುವೆ ಹಾಗೂ ಕಾರ್ಯಕ್ರಮಗಳನ್ನು ಕಡಿಮೆ ಮಾಡಬೇಕು ಎಂದಿದ್ದಾರೆ.

mp-prathap-simha
ಸಂಸದ ಪ್ರತಾಪ್ ಸಿಂಹ

By

Published : Mar 13, 2021, 3:25 PM IST

ಮೈಸೂರು: 2ನೇ ಬಾರಿ ಲಾಕ್​ಡೌನ್ ಮಾಡಲು ಯಾರಿಗೂ ಇಷ್ಟ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗ 2ನೇ ಹಂತದ ಕೋವಿಡ್ ಅಲೆ ಹೆಚ್ಚಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಾಗಿದ್ದು, ಈ ವೇಳೆ ನಾವು ಮೈಮರೆಯಬಾರದು ಎಂದರು.

ಲಾಕ್​​​ಡೌನ್​ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ

ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್ ಹೆಚ್ಚಾಗುತ್ತಿರುವ ವೇಳೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಮಾಡಿದ ಲಾಕ್​​​ಡೌನ್​​​ನಿಂದ ಉಂಟಾದ ವೈಯಕ್ತಿಕ ಹಾಗೂ ಆರ್ಥಿಕ ಬಿಕ್ಕಟ್ಟು ಹಾಗೂ ವೈಯಕ್ತಿಕ ನಷ್ಟದಿಂದ ಇನ್ನೂ ಚೇತರಿಕೆ ಕಂಡಿಲ್ಲ. ಈ ಸಂದರ್ಭದಲ್ಲಿ ಮತ್ತೆ ಲಾಕ್​​ಡೌನ್ ಮಾಡಲು ಯಾರಿಗೂ ಇಷ್ಟ ಇಲ್ಲ. ನಾವು ಸಾಧ್ಯವಾದಷ್ಟು ಜಾಗೃತಿ ವಹಿಸಬೇಕು. ಅದ್ಧೂರಿ ಮದುವೆ ಹಾಗೂ ಕಾರ್ಯಕ್ರಮಗಳನ್ನು ಕಡಿಮೆ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ಧ್ವನಿ-ಬೆಳಕು ಕಾರ್ಯಕ್ರಮ ಪುನರಾರಂಭ

ABOUT THE AUTHOR

...view details