ಮೈಸೂರು: ನಂಜನಗೂಡಿನ ತಾಲೂಕಿನ ಹುಚ್ಚುಗಣಿ ಗ್ರಾಮದಲ್ಲಿ ಮಹಾದೇವಮ್ಮ ದೇವಸ್ಥಾನ ನೆಲಸಮಗೊಳಿಸಿರುವ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲಿಸಿದರು.
ಮಹಾದೇವಮ್ಮ ದೇವಸ್ಥಾನಕ್ಕೆ ಸಂಸದ ಪ್ರತಾಪ್ಸಿಂಹ ಭೇಟಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಹಿಂದೂ ಧಾರ್ಮಿಕ ಸ್ಥಳ ಮತ್ತು ಭಾವೈಕ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಕಿಡಿಕಾರಿದರು.
800 ವರ್ಷ ಹಳೆಯ ದೇಗುಲ:
ಶ್ರೀಶಕ್ತಿ ಮಹಾದೇವಿ ದೇವಾಲಯಕ್ಕೆ ಬರೋಬ್ಬರಿ 800 ವರ್ಷಗಳ ಇತಿಹಾಸ ಇದೆ. ನೆಲಸಮಗೊಂಡಿರುವ ಸಮೀಪದಲ್ಲಿ ಸಾಕಷ್ಟು ವೀರಗಲ್ಲುಗಳಿವೆ. ಇದೊಂದು ಇತಿಹಾಸ ಪೂರ್ವದ ದೇವಾಲಯ ಎಂಬುವುದಕ್ಕೆ ಈ ವೀರಗಲ್ಲುಗಳೇ ಸಾಕ್ಷಿ. ಇದನ್ನು ಕೂಡ ಅಧಿಕಾರಿಗಳು ಗಮನಿಸಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ತಕ್ಕ ಪಾಠ:
ಇನ್ನು 92 ದೇವಾಲಯಗಳು ವಿವಿಧ ಮೂಲೆಗಳಲ್ಲಿವೆ. ಅವುಗಳನ್ನು ಯಾವುದೇ ಕಾರಣಕ್ಕೂ ಅಧಿಕಾರಿಗಳು ಮುಟ್ಟಲು ಬಿಡುವುದಿಲ್ಲ. ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಗ್ರಾಮಸ್ಥರು ಆತಂಕಕ್ಕೆ ಒಳಗಾಗುವುದು ಬೇಡ. ಈಗಾಗಲೇ ದಾನಿಗಳು ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಇದನ್ನೂಓದಿ: ನಂಜನಗೂಡಿನ ಮಹಾದೇವಮ್ಮ ದೇವಸ್ಥಾನ ತೆರವು: ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ರಾಜ್ಯ ನಾಯಕರಿಗೆ ವಿಷಯ ಮುಟ್ಟಿಸುವೆ:
ಉತ್ತಮ ರೀತಿಯಲ್ಲಿ ದೇವಾಲಯ ನಿರ್ಮಾಣ ಮಾಡಲು ನಾವು ಸಹಕರಿಸುತ್ತೇವೆ. ದೇವಾಲಯ ನೆಲಸಮವಾದ ಸನಿಹದಲ್ಲೇ ದೇವಿಯ ಮೂರ್ತಿ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ. ಇಲ್ಲಿಯ ವಾಸ್ತವ ವರದಿಯನ್ನು ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಇದನ್ನು ಬಿಜೆಪಿ ಪಕ್ಷದ ರಾಜ್ಯ ನಾಯಕರ ಗಮನಕ್ಕೆ ತರುತ್ತೇನೆ ಎಂದರು.
ಇದನ್ನೂ ಓದಿ: ನಂಜನಗೂಡಿನಲ್ಲಿ ದೇವಸ್ಥಾನ ನೆಲಸಮ... ಬಿಜೆಪಿಗೆ ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ?: ಸಿದ್ದರಾಮಯ್ಯ ಕಿಡಿ