ಮೈಸೂರು:ಸ್ವಾತಂತ್ರ್ಯ ಪೂರ್ವದಲ್ಲಿ ತಲೆಯ ಮೇಲೆ ಟೋಪಿ ಹಾಕಿಕೊಂಡವರನ್ನ ಕಾಂಗ್ರೆಸ್ಸಿಗರು ಎನ್ನುತ್ತಿದ್ದರು. ಈಗ ಜನರಿಗೆ ಟೋಪಿ ಹಾಕುವವರನ್ನು ಕಾಂಗ್ರೆಸ್ಸಿನವರು ಎಂದು ಕರೆಯುತ್ತಾರೆ. ಗ್ಯಾರಂಟಿ ಹೆಸರಿನಲ್ಲಿ ಲೋಕಸಭಾ ಚುನಾವಣೆಯವರೆಗೆ ಜನರನ್ನು ಮಂಗ್ಯಾ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್ನವರು ಘೋಷಣೆ ಮಾಡಿರುವ ಗ್ಯಾರಂಟಿಗಳಲ್ಲಿ ಯಾವುದೇ ಸ್ಪಷ್ಟನೆ ಇಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ನವರು ಎದೆ ಬಡಿದುಕೊಂಡು ಊರೂರಿಗೆ ಹೋಗಿ ಗ್ಯಾರಂಟಿಗಳ ಬಗ್ಗೆ ತಮಟೆ ಬಾರಿಸಿದ್ದರು. ಆದರೆ ಈಗ ಗ್ಯಾರಂಟಿ ವಿಚಾರದಲ್ಲಿ ಎಲ್ಲಾ ಷರತ್ತುಗಳನ್ನು ವಿಧಿಸಿ, ಮೋಸ ಮಾಡುತ್ತಿದ್ದಾರೆ. 200 ಯುನಿಟ್ ಉಚಿತ ಎಂದು ಹೇಳುತ್ತಾರೆ, ಆದರೆ ಷರತ್ತು ವಿಧಿಸಿದ್ದಾರೆ.
ಗೃಹ ಲಕ್ಷ್ಮಿ ಜಾರಿಗೆ ಆಧಾರ್ ಲಿಂಕ್ ಮಾಡಿದ ನಂತರ ಜಾರಿಗೆ ಮಾಡುತ್ತೇವೆ ಎನ್ನುತ್ತಾರೆ. ಹಿಂದೂಗಳ ಮನೆಗಳಲ್ಲಿ ಅತ್ತೆ-ಸೊಸೆಯರ ನಡುವೆ ಜಗಳ ತಂದಿಡುತ್ತಾರೆ. ಮುಸ್ಲಿಮರ ಮನೆಯಲ್ಲಿ ಒಬ್ಬರಿಗೆ 2 ರಿಂದ 3 ಜನ ಹೆಂಡತಿಯರಿರುತ್ತಾರೆ. ಅದರಲ್ಲಿ ಯಾರು ಯಜಮಾನಿ ಎಂಬುದರ ಬಗ್ಗೆ ಅವರವರಲ್ಲೇ ಬೆಂಕಿ ಹಾಕಿ, ಅವರ ಕುಟುಂಬವನ್ನು ಒಡೆಯುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
ಕರ್ನಾಟಕವನ್ನು ಭಿಕ್ಷಾ ರಾಜ್ಯ ಮಾಡಲು ಹೊರಟಿದ್ದಾರೆ:ಉಚಿತ ವಿದ್ಯುತ್, ಗೃಹ ಲಕ್ಷ್ಮಿ, 10 ಕೆಜಿ ಅಕ್ಕಿ, ಯುವ ನಿಧಿ ಸೇರಿದಂತೆ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿರುವ ಕಾಂಗ್ರೆಸ್ ಇದಕ್ಕೆ ಸಂಪನ್ಮೂಲಗಳನ್ನು ಎಲ್ಲಿಂದ ತರುತ್ತೇವೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು. ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆವರೆಗೆ ಜಾರಿ ಮಾಡಿ, ಜನರನ್ನು ದಿವಾಳಿ ಮಾಡಲು ಕಾಂಗ್ರೆಸ್ ಹೊರಟಿದ್ದು.