ಕರ್ನಾಟಕ

karnataka

ETV Bharat / state

'ಉಳ್ಳಾಲದ ಮುಲ್ಲಾ ಯು.ಟಿ‌.ಖಾದರ್ ನಿಜವಾದ ಮೂರ್ಖ, ಈತನಿಗೆ ಮೈಸೂರಿನ ಇತಿಹಾಸ ಗೊತ್ತಿಲ್ಲ' - Pratap Simha slams against UT khader

ನಿನ್ನೆ ಮೈಸೂರಿನಲ್ಲಿ ಶಾಸಕ ಯು.ಟಿ‌. ಖಾದರ್ 'ಮೈಸೂರಿನ ಸಂಸದ ಒಬ್ಬ ಮೂರ್ಖ' ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಇಂದು ತಿರುಗೇಟು ನೀಡಿದ್ದಾರೆ. ಉಳ್ಳಾಲದ ಮುಲ್ಲಾ ಯು.ಟಿ‌. ಖಾದರ್ ನಿಜವಾದ ಮೂರ್ಖ. ಈತನಿಗೆ ಮೈಸೂರಿನ ಇತಿಹಾಸ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

MP Pratap Simha
ಸಂಸದ ಪ್ರತಾಪ್ ಸಿಂಹ

By

Published : Feb 14, 2022, 2:02 PM IST

ಮೈಸೂರು: ಉಳ್ಳಾಲದ ಮುಲ್ಲಾ ಯು.ಟಿ‌.ಖಾದರ್ ನಿಜವಾದ ಮೂರ್ಖ. ಈತನಿಗೆ ಮೈಸೂರಿನ ಇತಿಹಾಸ ಗೊತ್ತಿಲ್ಲ ಎಂದು ಸಂಸದ ಪ್ರತಾಪ್​​ ಸಿಂಹ ತಿರುಗೇಟು ನೀಡಿದ್ದಾರೆ.


ಇಂದು ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಜರ ವಂಶಕ್ಕೆ ದ್ರೋಹ ಬಗೆದ ಹೈದರಾಲಿಯ ಮಗ ಟಿಪ್ಪು ಅಂತಾ ಗೊತ್ತಿಲ್ವಾ?. ನಿಜವಾದ ಮೂರ್ಖತನ ಪ್ರದರ್ಶನ ಮಾಡುತ್ತಿರುವುದು ಖಾದರ್ ಎಂದು ಗುಡುಗಿದರು.

'ಕೋರ್ಟ್ ತೀರ್ಪು ಬರುವವರೆಗೆ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ಇಂದು ಹಿಜಾಬ್ ಕೇಳಿದ್ದಾರೆ, ನಾಳೆ ಬುರ್ಖಾ ಹಾಕಿಕೊಂಡು ಬರುತ್ತಾರೆ. ಶುಕ್ರವಾರ ಬಂದರೆ ಶಾಲೆಯಲ್ಲಿಯೇ ನಮಾಜ್ ಮಾಡುತ್ತೇವೆ ಎನ್ನುತ್ತಾರೆ. ಮುಂದೊಂದು ದಿನ ಕ್ಲಾಸ್ ರೂಂನಲ್ಲೇ ಪ್ರೇಯರ್ ಹಾಲ್ ಕಟ್ಟಿಸಿಕೊಡಿ ಎಂದು ಕೇಳುತ್ತಾರೆ. ಹಾಗೇನೇ, ದೇಶವನ್ನೇ ತುಂಡು ಮಾಡಿ ಎನ್ನುತ್ತಾರೆ. 70 ವರ್ಷಗಳ ಹಿಂದೆ ಇವರು ಇದನ್ನೇ ಮಾಡಿದ್ದು. ಇವರ ಒತ್ತಡಕ್ಕೆ ಮಣಿಯುತ್ತ ಹೋದರೆ ದೇಶವನ್ನೇ ತುಂಡು ತುಂಡು ಮಾಡುತ್ತಾರೆ' ಎಂದು ವಾಗ್ದಾಳಿ ನಡೆಸಿದರು.

'ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆ. ಆ ಜಾತಿ ಈ ಜಾತಿ, ಈ ಧರ್ಮ ಎಂದು ನೋಡದೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಶಾಲೆಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಜಾರಿಯಲ್ಲಿ ಇದೆ. ಇದನ್ನು ತಿಳಿದುಕೊಳ್ಳುವ ಕನಿಷ್ಠ ಜ್ಞಾನ ಖಾದರ್​​ಗೆ ಇಲ್ಲ. ಇದು ಇವರೊಬ್ಬರ ಸಮಸ್ಯೆ ಅಲ್ಲ, ಕಾಂಗ್ರೆಸ್​​ನ ಸಮಸ್ಯೆ' ಎಂದು ಹೇಳಿದರು.

ಇದನ್ನೂ ಓದಿ:ಸಂಸದ ಪ್ರತಾಪ್ ಸಿಂಹನಂತಹ ಮೂರ್ಖ ಯಾರಿಲ್ಲ: ಯು ಟಿ ಖಾದರ್ ಗರಂ

ABOUT THE AUTHOR

...view details