ಕರ್ನಾಟಕ

karnataka

ETV Bharat / state

ಜನ ಆಯ್ಕೆ ಮಾಡೋದು ದಂಡಿಗೆಗೆ ಕುಳಿತುಕೊಳ್ಳಲಿ ಅಂತಲ್ಲ: ಸಂಸದ ಪ್ರತಾಪ ಸಿಂಹ - Jawaharlal Nehru National Urban Renewal Mission

ಜನರು ಸಂಸದರನ್ನ, ಶಾಸಕರನ್ನ ಆಯ್ಕೆ ಮಾಡುವುದು ಕೆಲಸ ಮಾಡಲಿ ಅಂತ, ದಂಡಿಗೆಗೆ ಹೋಗಿ ಕುಳಿತುಕೊಳ್ಳಲಿ ಅಂತಾ ಅಲ್ಲವೆಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

mp pratap simha reaction on minister post
ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯೆ

By

Published : Aug 1, 2021, 5:18 PM IST

ಮೈಸೂರು:ಜನ ಆಯ್ಕೆ ಮಾಡುವುದು ದಂಡಿಗೆ ಏರಲಿ ಅಂತಲ್ಲ, ಕೆಲಸ ಮಾಡಲಿ ಅಂತ. ಜನಪ್ರತಿನಿಧಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದ ಪ್ರತಾಪ ಸಿಂಹ ಸಚಿವಾಕಾಂಕ್ಷಿಗಳಿಗೆ ತಿವಿದಿದ್ದಾರೆ.

ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು, ನಾಲ್ಕು, ಐದು ಬಾರಿ ಕೆಲವರು ಶಾಸಕರಾಗಿದ್ದಾರೆ. ಪಕ್ಷದ ಹಿರಿಯರು ಕುಳಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದರು.

2008ರಲ್ಲಿ JNNURM(Jawaharlal Nehru National Urban Renewal Mission)​ ಯೋಜನೆಯ ಅನುದಾನವನ್ನ ಮೈಸೂರು ನಗರ ಸಮರ್ಪಕವಾಗಿ ಬಳಸಿಕೊಂಡಿಲ್ಲ. 2015ರಲ್ಲಿ ಸ್ಮಾರ್ಟ್​ ಸಿಟಿ ಯೋಜನೆ ಘೋಷಣೆಯಾದಾಗ ಮೈಸೂರನ್ನು ಶಿಫಾರಸು ಮಾಡಲು ಆಗಲಿಲ್ಲ. ಯಾಕೆಂದರೆ JNNURM ಯೋಜನೆಯ ಶೇ.80ರಷ್ಟು ಅನುದಾನ ಬಳಕೆಯಾಗಿಲ್ಲ. ಅಲ್ಲದೇ, 2011ರಿಂದ ನಗರ ಪಾಲಿಕೆ ಲೋಕಲ್ ಆಡಿಟ್ ಆಗಿಲ್ಲ ಎಂದು ತಿಳಿಸಿದರು.

ಸ್ಮಾರ್ಟ್​ ಸಿಟಿ ಯೋಜನೆಯನ್ನ ಮೈಸೂರು ಪಡೆದುಕೊಳ್ಳುವ ಅವಕಾಶವಿದೆ. ಸರ್ಕಾರ ಸಕಾರಾತ್ಮಕವಾಗಿ ಯೋಚಿಸುತ್ತಿದೆ ಎಂದು ಇದೇ ವೇಳೆ ಹೇಳಿದರು.

ABOUT THE AUTHOR

...view details