ಕರ್ನಾಟಕ

karnataka

ETV Bharat / state

ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ: ಪ್ರತಾಪ್​ ಸಿಂಹ

ಮೊದಲು ಕೆಎಫ್ ಡಿ ಹಾಗೂ ಪಿಎಫ್ ಐ ಸಂಘಟನೆ ಬಂದ್ ಮಾಡಿ. ಹಿಜಾಬ್​, ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ. ಹಿಜಾಬ್ ಬಿಟ್ಟು ಕಿತಾಬ್ ಹಿಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

ಪ್ರತಾಪ್​ ಸಿಂಹ
ಪ್ರತಾಪ್​ ಸಿಂಹ

By

Published : Feb 13, 2022, 2:26 PM IST

ಮೈಸೂರು: ಹಿಜಾಬ್, ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ ಎಂದು ಸಂಸದ ಪ್ರತಾಪ್​ ಸಿಂಹ ಕಿವಿಮಾತು ಹೇಳಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಜಾಬ್ ಗಲಾಟೆಯ ಹಿಂದೆ ಕೆಎಫ್​ಡಿ, ಪಿಎಫ್​ಐ ಇದೆ. ಶಾಂತಿ ಕದಡಬೇಡಿ ಎಂದು ಮನವಿ ಮಾಡಬೇಡಿ. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲೇಬೇಕು ಎಂದರು.

ಕೇರಳದ ಮುಸ್ಲಿಂ ಸಂಘಟನೆಗಳಿಂದ ಪ್ರಭಾವಿತರಾಗಿರುವವರು ಶಾಂತಿಯ ಮನವಿಗೆ ಬಗ್ಗುವುದಿಲ್ಲ. ಮೊದಲು ಕೆಎಫ್ ಡಿ, ಪಿಎಫ್ ಐ ಸಂಘಟನೆ ಬಂದ್ ಮಾಡಿ. ಹಿಜಾಬ್​, ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ. ಹಿಜಾಬ್ ಬಿಟ್ಟು ಕಿತಾಬ್ ಹಿಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಹಿಜಾಬ್​ ಅನ್ನು ಅವರು ಬಿಟ್ಟು ಬಂದರೆ ಆ ಕ್ಷಣವೇ ಕೇಸರಿ ಶಾಲಿನ ಪ್ರಸ್ತಾಪ ಇರುವುದಿಲ್ಲ ಎಂದು ತಿಳಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರತಾಪ್​ ಸಿಂಹ

ನೀಲಿ ಶಾಲು ಹಾಕುವವರೆಲ್ಲ 'ಥಾಟ್ಸ್ ಆನ್ ಪಾಕಿಸ್ತಾನ' ಪುಸ್ತಕ ಓದಿ. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಈ ದೇಶದ ಮುಸ್ಲಿಮರ ಬಗ್ಗೆ ಅಂದೇ ತಿಳಿದಿತ್ತು. ನೀಲಿ ಶಾಲು ಧರಿಸುವ ಮೊದಲು ವಾಸ್ತವ ತಿಳಿದುಕೊಳ್ಳಿ. ಅಂಬೇಡ್ಕರ್ ಅವರು ಬರೆದಿರುವ ಥಾಟ್ಸ್ ಆನ್ ಪಾಕಿಸ್ತಾನ್ ಓದಿ. ಆ ಪುಸ್ತಕದಲ್ಲಿ ಎಲ್ಲ ವಿಚಾರವನ್ನು ಅಂಬೇಡ್ಕರ್ ತಿಳಿಸಿದ್ದಾರೆ. ನೀಲಿ ಶಾಲು ಧರಿಸುವ ಮುನ್ನ ಓಡಿಕೊಂಡರೆ ಒಳ್ಳೆಯದು ಎಂದು ನೀಲಿ ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸಿದವರಿಗೆ ಕುಟುಕಿದರು.

ಇದನ್ನೂ ಓದಿ:'ನಾನು ಹೃದಯದಿಂದ ಮುಸ್ಲಿಂ, ಹಿಜಾಬ್‌ನಿಂದ ಅಲ್ಲ': ಕಾಶ್ಮೀರದ 12ನೇ ತರಗತಿ ಟಾಪರ್‌ ಅರೂಸಾ ಪರ್ವೇಜ್‌

ರಾಷ್ಟ್ರೀಯ ತನಿಖೆಗೆ ರಘುಪತಿ ಭಟ್ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕವಾಗಿ ರಘುಪತಿ ಭಟ್, ಶಿಕ್ಷಣ ಸಚಿವ ನಾಗೇಶ್, ಸಿಎಂ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಸಮವಸ್ತ್ರವೇ ಅಂತಿಮ ಎಂಬ ನಿಲುವಿಗೆ ಬದ್ಧರಾಗಿದ್ದಾರೆ. ಕರಾವಳಿ ಭಾಗ ಅಶಾಂತಿಯ ಕೇಂದ್ರವಾಗಿದೆ. ಕೇರಳ ಮಾದರಿಯ ಹತ್ಯೆ ಮತ್ತು ಮತಾಂದತೆ ಕರ್ನಾಟಕಕ್ಕೂ ಹಬ್ಬಿದೆ, ಅದು ಕರಾವಳಿ ಮುಖಾಂತರ ಹಬ್ಬಿದೆ. ಈ ಬಗ್ಗೆ ಉಡುಪಿ ಹಾಗೂ ಮಂಗಳೂರು ಎಚ್ಚೆತ್ತುಕೊಳ್ಳದಿದ್ದರೆ ಇನ್ನೊಂದು ಕಾಸರಗೋಡು ಹಾಗೂ ಕೇರಳ ಮಾದರಿಯಾಗಲಿದೆ ಎಂದು ಎಚ್ಚರಿಸಿದರು.

ಈ ವ್ಯವಸ್ಥಿತ ಪಿತೂರಿ ಬಗ್ಗೆ ರಾಷ್ಟ್ರೀಯ ತನಿಖೆಯಾಗಬೇಕು ಎನ್ನುವುದಕ್ಕೆ ರಘುಪತಿ ಭಟ್ ಒತ್ತಾಯಿಸಿದ್ದಾರೆ. ಅವರ ಈ ತೀರ್ಮಾನವನ್ನು ನಾನು ಸಮರ್ಥಿಸುತ್ತೇನೆ. ಈ ಕಾರಣಕ್ಕೆ ರಘುಪತಿ ಭಟ್ ಅವರನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು.

ಇದನ್ನೂ ಓದಿ:ವಕೀಲರ ಗಲಾಟೆ ಪ್ರಕರಣ: ವಕೀಲ ಜಗದೀಶ್​ಗೆ ನ್ಯಾಯಾಂಗ ಬಂಧನ

ಕೇಂದ್ರ ಬಜೆಟ್ ಕುರಿತು‌ ಮಾತನಾಡಿದ ಅವರು,748 ಜಿಲ್ಲೆಗಳಿಗೂ ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ಮಾಹಿತಿ ನೀಡಲಾಗುವುದು. ಬಜೆಟ್​ನ ಸಂಪೂರ್ಣ ಮಾಹಿತಿ ಜನರಿಗೆ ತಿಳಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ. ಮೋದಿ ಆಡಳಿತಕ್ಕೆ ಬಂದ ಮೇಲೆ ವರ್ಷಕ್ಕೆ 10 ಸಾವಿರ ಕಿಲೋಮೀಟರ್ ರಸ್ತೆ ನಿರ್ಮಾಣವಾಗುತ್ತಿದೆ. ಈ ವರ್ಷ 25 ಸಾವಿರ ಕಿ.ಮೀ ರಸ್ತೆ ನಿರ್ಮಾಣವಾಗುತ್ತಿದೆ. 200 ಕಿ.ಮೀ ವೇಗದಲ್ಲಿ ಚಲಿಸುವ ನೂತನ ರೈಲುಗಳನ್ನ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಭವಿಷ್ಯದ ದೃಷ್ಟಿಯಿಂದ ಸ್ಪೀಡ್ ಟ್ರೈನ್​ಗಳನ್ನ ತರಲಾಗುತ್ತಿದೆ. ಮೈಸೂರು, ಚೆನ್ನೈ ಮಾರ್ಗವಾಗಿಯೂ ಸ್ಪೀಡ್ ಟ್ರೈನ್ ತರಲಾಗಿದೆ. ರಾಜ್ಯಕ್ಕೆ 6900 ಕೋಟಿ ರೈಲ್ವೆ ಪ್ರಾಜೆಕ್ಟ್​ಗೆ ಹಣ ನೀಡಲಾಗಿದೆ. ನದಿ ಜೋಡಣೆ ಬಗ್ಗೆ ಈ ವರ್ಷ 5 ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ಈ ಪೈಕಿ ಕಾವೇರಿ ನದಿಯೂ ಸೇರಿದೆ.ಈ ವರ್ಷ 80 ಲಕ್ಷ ಮನೆ ಕಟ್ಟಬೇಕು ಎಂದು ಯೋಚಿಸಿದ್ದಾರೆ. ಮೋದಿ ಅವರ ಸರ್ಕಾರ ಉತ್ತಮ ಬಜೆಟ್ ನೀಡಿದೆ. ನಮ್ಮ ಊರಿಗೆ ಏನು ಕೊಡುಗೆ ನೀಡಿದೆ ಎನ್ನುವುದಕ್ಕಿಂತ ಮೊದಲು ದೇಶಕ್ಕೆ ಇಂತಹ ಕೊಡುಗೆ ನೀಡಿದ್ದಾರೆ ಎನ್ನುವುದನ್ನ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ:ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ: ಬೊಮ್ಮಾಯಿ

ಬಿಜೆಪಿ ಹೆಚ್ಚು ಸಾಲ ಮಾಡಿ ಬಜೆಟ್ ಮಂಡಿಸಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಮೂರು ಪಟ್ಟು ಜಾಸ್ತಿ ಸಾಲ ಮಾಡಿ ಹೋಗಿದ್ದಾರೆ ಎಂದು ಟಾಂಗ್ ನೀಡಿದರು.

ಸಾಲ ಮಾಡದೆ ಆಡಳಿತ ನಡೆಸಿದ್ದಾರಾ ಸಿದ್ದರಾಮಯ್ಯ?, ಅರ್ಥ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ. ಏನೇ ಹೇಳಿದ್ರು ಮಾಧ್ಯಮದಲ್ಲಿ ಪ್ರಕಟವಾಗುತ್ತದೆ ಎಂದು ಹೇಳಿಕೆ ನೀಡುತ್ತಾರೆ ಅಷ್ಟೇ. ರಾಜ್ಯದಲ್ಲಿ ಇವರ ಆಡಳಿತದಲ್ಲೇ ಹೆಚ್ಚು ಸಾಲ ಉಂಟಾಗಿದೆ. ಕೆಂಗಲ್ ಹನುಮಂತಯ್ಯ ಅವರಿಂದ ಜಗದೀಶ್ ಶೆಟ್ಟರ್ ವರೆಗಿನ ಸಾಲ ಹಾಗೂ ಸಿದ್ದರಾಮಯ್ಯ ಸರ್ಕಾರದ ಸಾಲವನ್ನ ಒಂದು ತಕಡಿಗೆ ಇಟ್ಟರೆ, ಸಿದ್ದರಾಮಯ್ಯದ್ದೇ ಹೆಚ್ಚು ಸಾಲ ಎಂದು ಕುಟುಕಿದರು.

ಸಾಲ ತಂದು ಕಾಂಗ್ರೆಸ್ ವೈಯಕ್ತಿಕ ಖಜಾನೆ ತುಂಬಿಸಿಕೊಂಡಿದೆ. ಸಾಲ ಮಾಡದೆ ಯಾವ ಸರ್ಕಾರ ನಡೆದಿದೆ ಸಿದ್ದರಾಮಯ್ಯ ತಿಳಿಸಲಿ?. ತಾವೇ ಸಿಎಂ ಆಗಿದ್ದಾಗ ಪಾಲ್ಕನ್ ಫ್ಯಾಕ್ಟರಿ ಮುಚ್ಚಿದ್ದೇಕೆ. ಫ್ಯಾಕ್ಟರಿಯ ನೌಕರರ ಕೆಲಸ ಹೋಗಿದೆ. ಈ ಸಮಯದಲ್ಲಿ ಸಿಎಂ ಆಗಿದ್ದರು ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಸಾಲ ಇಲ್ಲದ ದೇಶ ಯಾವುದಿದೆ ಹೇಳಿ?. ಸಿದ್ದರಾಮಯ್ಯ ಅವರೇ ತಮ್ಮ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿ ಆಡಳಿತ ಮಾಡಿದ್ದಾರೆ. ರಾಜ್ಯದ ಯಾವ ಸಿಎಂ ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅರ್ಥ ವ್ಯವಸ್ಥೆಯೇ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಆರ್ಥಿಕ ವ್ಯವಸ್ಥೆಯೇ ಅರ್ಥವಾಗಲ್ಲ. ಹೀಗಾಗಿ, ಅವರು ಸುಮ್ಮನೆ ಸಾಲದ ಬಜೆಟ್ ಅಂತಾ ಟೀಕೆ ಮಾಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:ಉಡುಪಿ ಜಿಲ್ಲೆ ಶಾಲೆಗಳ ಸುತ್ತಮುತ್ತ 144 ಸೆಕ್ಷನ್ ಜಾರಿ

ಸಿದ್ದರಾಮಯ್ಯ ಅವರು 13 ಬಜೆಟ್ ಮಂಡಿಸಿದ್ದಾರೆ ಅಷ್ಟೇ. ಅವರಿಗೆ ಆರ್ಥಿಕ ವ್ಯವಸ್ಥೆ ಸ್ಪಷ್ಟವಾಗಿ ಅರ್ಥವಾಗಿಲ್ಲ. ನಾವು ಸಾಲ ಮಾಡಿದ ಹಣವನ್ನು ದೇಶದ ಅಭಿವೃದ್ಧಿಗೆ ಬಳಸುತ್ತೇವೆ. ಕಾಂಗ್ರೆಸ್​ನವರು ಸಾಲ ಮಾಡಿ ತಮ್ಮ ಖಜಾನೆ ತುಂಬಿಸಿ ಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ - ರಾಜ್ಯದಲ್ಲಿ ಏನೇನಾಗಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ABOUT THE AUTHOR

...view details