ಕರ್ನಾಟಕ

karnataka

ETV Bharat / state

ರಾಜಕಾರಣಿಗಳಿಗಿಂತ ಹೆಚ್ಚಾಗಿ ಅಧಿಕಾರಿಗಳು ಲೂಟಿ ಹೊಡೆಯುತ್ತಾರೆ: ಪ್ರತಾಪ್ ಸಿಂಹ - ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಲೈವ್

ಎಲ್ಲಾ ರಾಜಕಾರಣಿಗಳು ಕೆಟ್ಟವರು, ಎಲ್ಲಾ ಅಧಿಕಾರಿಗಳು ಒಳ್ಳೆಯವರು ಎಂದು ತಿಳಿದುಕೊಳ್ಳಬೇಡಿ. ನಾರ್ಥ್ ಇಂಡಿಯನ್ ಐಎಎಸ್ ಅಧಿಕಾರಿಗಳು ಎಲ್ಲೆಲ್ಲಿ ಇನ್ವೆಷ್ಟ್ ಮೆಂಟ್ ಮಾಡಿದ್ದಾರೆ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಅಧಿಕಾರಿಗಳು ಎಲ್ಲೆಲ್ಲಿ ಇನ್ವೆಷ್ಟ್ ಮೆಂಟ್ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದಿದ್ದಾರೆ.

MP Pratap Simha
ಸಂಸದ ಪ್ರತಾಪ್ ಸಿಂಹ

By

Published : Jun 6, 2021, 10:35 AM IST

Updated : Jun 6, 2021, 1:23 PM IST

ಮೈಸೂರು:ರಾಜಕಾರಣಿಗಳು ಲೂಟಿ ಹೊಡೆಯುತ್ತಾರಲ್ಲಾ ಅದಕ್ಕಿಂತ ಹೆಚ್ಚಾಗಿ ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್ ಲೈವ್‌ನಲ್ಲಿ‌ ಐಎಎಸ್(IAS) ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಸಂಸದ ಪ್ರತಾಪ್ ಸಿಂಹ ಹೇಳಿಕೆ

ಕರ್ನಾಟಕದ ಅಧಿಕಾರಿಗಳು ಎಲ್ಲಿ ಇನ್ವೆಸ್ಟ್ ಮೆಂಟ್ ಮಾಡಿದ್ದಾರೆ ಎಂಬುದರ ಬಗ್ಗೆ ಹಿರಿಯ ಪತ್ರಕರ್ತರನ್ನು ಕೇಳಿ. ಎಲ್ಲರೂ ಒಬ್ಬರ ಮೇಲೆ ಮುಗಿಬಿದ್ದಿದ್ದಾರೆ ಅಂದಕೂಡಲೇ ಕಳ್ಳರೆಲ್ಲಾ ಒಟ್ಟಾಗಿದ್ದಾರೆ ಎಂದರ್ಥ ಅಲ್ಲ. ಇಡೀ ಜಗತ್ತು ಹಿಟ್ಲರ್ ಮೇಲೆ ಮುಗಿಬಿದ್ದಿತ್ತು. ಹಾಗಾದ್ರೆ ಹಿಟ್ಲರ್ ಒಳ್ಳೆಯವನಾ?, ಮುಗಿಬಿದ್ದವರು ಒಳ್ಳೆಯವರಾ?. ಎಲ್ಲದಕ್ಕೂ ಒಂದೊಂದು ಫ್ಲಿಪ್‌ಸೈಡ್ ಇರುತ್ತದೆ ಎಂದರು.

ಈ ವಿಚಾರಗಳು ನಿಮಗೆ ಅರ್ಥವಾಗುವುದಿಲ್ಲ. ಈ ವಿಚಾರದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ. ಸಾರ್ವಜನಿಕರು ಭ್ರಮೆಯಲ್ಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

Last Updated : Jun 6, 2021, 1:23 PM IST

ABOUT THE AUTHOR

...view details