ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಚಾಮುಂಡಿ ಬೆಟ್ಟದಲ್ಲಿ ಡಿಸಿಪಿ ವಿರುದ್ಧ ಹಾರಿಹಾಯ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
_____ಗೆ ಹುಟ್ಟಿದವರು ಮನೆಯಲ್ಲಿ ಮಹಿಷ ದಸರಾ ಮಾಡಿಕೊಳ್ಳಲಿ: ವೈರಲ್ ಆಯ್ತು ಪ್ರತಾಪ್ ಸಿಂಹ ವಿಡಿಯೋ - ಪೊಲೀಸರ ವಿರುದ್ಧ ಪ್ರತಾಪ್ಸಿಂಹ ಆಕ್ರೋಶ
ಸಂಸದ ಪ್ರತಾಪ್ ಸಿಂಹ ಚಾಮುಂಡಿ ಬೆಟ್ಟದಲ್ಲಿ ಡಿಸಿಪಿ ವಿರುದ್ಧ ಹಾರಿಹಾಯ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಗತಿಪರರಿಂದ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮಹಿಷಾಸುರ ಮೂರ್ತಿಯ ಪಕ್ಕ ವೇದಿಕೆ ಹಾಕಲಾಗುತ್ತಿತ್ತು. ಆಗ ಸ್ಥಳಕ್ಕಾಗಮಿಸಿದ ಸಂಸದ ಪ್ರತಾಪ್ ಸಿಂಹ ಅವರು ಸ್ಥಳೀಯ ಗ್ರಾಮ ಪಂಚಾಯತ್ ನೌಕರರ ವಿರುದ್ಧ ಇಲ್ಲಿ ಶಾಮಿಯಾನ ಹಾಕಲು ಯಾರು ಅನುಮತಿ ನೀಡಿದರು ಎಂದು ಜೋರು ಧ್ವನಿಯಲ್ಲೇ ಕೇಳಿದ್ರು.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಡಿಸಿಪಿ ಮುತ್ತುರಾಜ್ ಅವರಿಗೆ ಪೊಲೀಸರೇ ನಿಮ್ಮಿಂದ ಇಂತಹ ಬೇಜವಾಬ್ದಾರಿ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಹಾರಿಹಾಯ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ತಕ್ಷಣ ಶಾಮಿಯಾನ ಹಾಗೂ ವೇದಿಕೆಯನ್ನು ತೆಗೆಯುವಂತೆ ಆದೇಶಿಸಿದರು. ನಂತರ ವೇದಿಕೆಯನ್ನು ತೆರವುಗೊಳಿಸಲಾಯಿತು.